Oplus_0

ಜಾತಿ ಗಣತಿಯಲ್ಲಿ ಉಪ್ಪಾರ ಎಂದು ನಮೂದಿಸಲು ವಸಂತಕುಮಾರ್ ಚೂರಿ ಮನವಿ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಡಿ ಜಾತಿ ಜನಗಣತಿಯಲ್ಲಿ ಅತಿ ಮುಖ್ಯವಾಗಿ ಜಾತಿ ಕಾಲಂ 9 ರಲ್ಲಿ ಉಪ್ಪಾರ ಕೋಡ ನಂ. 1465 ಇದರಲ್ಲಿ ಕಡ್ಡಾಯವಾಗಿ ಉಪ್ಪಾರ ಎಂದು, ಉಪಜಾತಿ ಕಾಲಂ 10 ರಲ್ಲಿ ಉಪ್ಪಾರರಿಗೆ ಸಂಬಂಧಿಸಿದ ಹಲವು ಉಪಜಾತಿಗಳಿವೆ ಅವು ನಮೂದಿಸಬೇಕು ಎಂದು ಉಪ್ಪಾರ ಸಮಾಜದ ತಾಲೂಕು ಅಧ್ಯಕ್ಷ ವಸಂತಕುಮಾರ್ ಚೂರಿ ಮನವಿ ಮಾಡಿದ್ದಾರೆ.

ಸೆ.22 ರಿಂದ ಅ.7 ರವರೆಗೆ ಕರ್ನಾಟಕ ರಾಜ್ಯದಾದ್ಯಂತ ಮನೆ ಮನೆಗೆ ತೆರಳಿ ಜಾತಿ ಸಮೀಕ್ಷೆಯನ್ನು ಹಮ್ಮಿಕೊಂಡಿದೆ. ನಮೂನೆಯ (ಅನುಬಂಧ-1) ರಲ್ಲಿ 60 ಕಾಲಂಗಳನ್ನು ಒಳಗೊಂಡಿದೆ. ನಿಮ್ಮ ಕುಟುಂಬಕ್ಕೆ ಅನ್ವಯಿಸುವ ಎಲ್ಲಾ ಕಾಲಂಗಳನ್ನು ತುಂಬುವಂತೆ ಗಣತಿದಾರರಿಗೆ ಮಾಹಿತಿ ನೀಡಬೇಕು. ಅತಿ ಮುಖ್ಯವಾಗಿ ಜಾತಿ ಕಾಲಂ 9 ರಲ್ಲಿ ಉಪ್ಪಾರ ಕೋಡ ನಂ. 1465 ನಮೂದಿಸಬೇಕು ಎಂದು ಕೋರಿದ್ದಾರೆ.

ತಾವುಗಳೇನಾದರೂ ಈ ಹಿಂದೆ ಜಾತಿ ಪ್ರಮಾಣ ಪತ್ರದಲ್ಲಿ ಉಪಜಾತಿಗಳನ್ನು ನಮೂದಿಸಿದ್ದರೆ ಮಾತ್ರ ಗಣತಿದಾರರಿಗೆ ಮಾಹಿತಿ ನೀಡಿ ಇಲ್ಲದಿದ್ದರೆ ಕಾಲಂ ನಂ.9 ರಂತೆ ಉಪ್ಪಾರ ಎಂದು ಮಾತ್ರ ಬರೆಸುವುದು. ಈ ಹಿಂದೆ ಉಪ್ಪಾರ ಜಾತಿ ಸಂಖ್ಯೆ ಕಡಿಮೆ ತೋರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಬಾರಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ಎಚ್ಚರ ವಹಿಸುವುದು ಅನಿವಾರ್ಯವಾಗಿದೆ ಮತ್ತು ಅತ್ಯಂತ ಹಿಂದುಳಿದ ಪ್ರವರ್ಗ-1 ರಲ್ಲಿರುವ ಉಪ್ಪಾರು ಮೀಸಲಾತಿಗಾಗಿ ಹೋರಾಡುತ್ತಿದ್ದು ಈ ಸಮೀಕ್ಷೆ ವರದಿ ಅತ್ಯಂತ ಮಹತ್ವದಾಗಿದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!