ಜಾತಿ ಜನಗಣತಿಯಲ್ಲಿ ಲಿಂಗಾಯತ ಎಂದು ನಮೂದಿಸಲು ವಿರುಪಾಕ್ಷರುದ್ರ ಬೆಣ್ಣಿ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾಳೆಯಿಂದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಸರ್ವ ಬಂಧುಗಳು ಭಾಗವಹಿಸಿ ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಸಂಚಾಲಕ ವಿರುಪಾಕ್ಷರುದ್ರ ಬೆಣ್ಣಿ ಕರೆ ನೀಡಿದ್ದಾರೆ.
ಸಮಾಜ ಬಾಂಧವರು ಧರ್ಮ, ಜಾತಿ, ಉಪಜಾತಿಯ ಬಗ್ಗೆ ಕೆಳಗೆ ನೀಡಿದ ಮಾಹಿತಿ ಪ್ರಕಾರ ತಪ್ಪದೇ ಮಾಹಿತಿ ನೀಡಿ ಅದನ್ನು ಗಣತಿದಾರರು ಸರಿಯಾಗಿ ದಾಖಲಿಸಿದ್ದಾರೆಯೇ? ಎಂದು ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಧರ್ಮ ಕಾಲಂನಲ್ಲಿ (ಇತರೇ) ಲಿಂಗಾಯತ, ಜಾತಿ ಕಾಲಂನಲ್ಲಿ ಲಿಂಗಾಯತ, ಜೊತೆಗೆ ತಮ್ಮ ತಮ್ಮ ಜಾತಿ/ಒಳಪಂಗಡ ಉದಾಹರಣೆಗೆ ಲಿಂಗಾಯತ ಪಂಚಮಸಾಲಿ, ಲಿಂಗಾಯತ ಬಣಜಿಗ, ಲಿಂಗಾಯತ ಸಾದರ, ಲಿಂಗಾಯತ ಗಾಣಿಗ ಎಂದು ನಮೂದಿಸಬೇಕು ಎಂದು ಕೋರಿದ್ದಾರೆ.
ಕರ್ನಾಟಕ ಸರಕಾರವು ಈಗಾಗಲೇ ಲಿಂಗಾಯತ ಧರ್ಮವೆಂದು ಘೋಷಣೆ ಮಾಡಿದೆ. ಕೇಂದ್ರ ಸರಕಾರ ಅನುಮೋದನೆ ನೀಡಿದ ಮೇಲೆ ಈ ಆದೇಶ ಜಾರಿಗೆ ಬರುತ್ತದೆ. ಆದ್ದರಿಂದ ಎಲ್ಲ ಬಸವಾನುಯಾಯಿಗಳು ಧರ್ಮ ಲಿಂಗಾಯತ ಎಂದು, ಜಾತಿ ಲಿಂಗಾಯತದೊಂದಿಗೆ ತಮ್ಮ ತಮ್ಮ ಜಾತಿ(ಒಳಪಂಗಡ)ಬರೆಸಬೇಕು. ಈ ನಿಟ್ಟಿನಲ್ಲಿ ಲಿಂಗಾಯತ ಬಾಂಧವರು ಬೇರೆಯವರ ಅಪಪ್ರಚಾರಕ್ಕೆ ಕಿವಿಗೊಡದೇ ಸಮೀಕ್ಷೆಯಲ್ಲಿ ಭಾಗವಹಿಸಿ ಮೇಲಿನಂತೆ ಮಾಹಿತಿ ಬರೆಸಬೇಕೆಂದು ಮನವಿ ಮಾಡಿದ್ದಾರೆ.

