Oplus_0

ಕಲಬುರಗಿ ಜಿಲ್ಲಾ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ, ನಿವೇಶನ ವೀಕ್ಷಣೆ

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಶುಕ್ರವಾರ ಭೇಟಿ ನೀಡಿದ ಅವರು, ನಿವೇಶನ ಸ್ಥಳ ವೀಕ್ಷಣೆ ಮಾಡಿದರು.

ಕಂದಾಯ ಇಲಾಖೆಯಿಂದ ಗುತ್ತಿಗೆ ಅವಧಿ ವಿಸ್ತರಿಸಿ ವಿಧಿ‌ಸಿದ ಗುತ್ತಿಗೆ ಶುಲ್ಕದ ಮೊತ್ತ 2 ಕೋಟಿ 37 ಲಕ್ಷ ರುಪಾಯಿ ಭರಿಸಲು ಆದೇಶವಾಗಿದ್ದು, ಸರ್ಕಾರಿ ನೌಕರರ ಸಂಘ ಯಾವುದೇ ಆದಾಯ ಹೊಂದಿರುವುದಿಲ್ಲ ಹೀಗಾಗಿ ಇಷ್ಟೊಂದು ಹಣ ಭರಿಸಲು ತೊಂದರೆಯಾಗುತ್ತಿದೆ. ಅದಕ್ಕಾಗಿ ವಿಧಿಸಿದ ಗುತ್ತಿಗೆ ಅವಧಿ ಶುಲ್ಕವನ್ನು ಸಂಪೂರ್ಣ ವಿನಾಯಿತಿಗೊಳಿಸಲು ತಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಮತ್ತು ಪದಾಧಿಕಾರಿಗಳು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಕ್ಷಣವೇ ಜಿಲ್ಲಾ ಸರ್ಕಾರಿ ನೌಕರರ ಭವನದ ನಿವೇಶನಕ್ಕೆ ವಿಧಿಸಿದ ಶುಲ್ಕದ ಮೊತ್ತ ವಿನಾಯಿತಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಧರ್ಮರಾಯ ಜವಳಿ, ಚಂದ್ರಕಾಂತ ಏರಿ, ಎಂ.ಬಿ. ಪಾಟೀಲ, ಕೃಷ್ಣಚಾರಿ ಜೋಶಿ, ರಾಜೇಶ ನೀಲಳ್ಳಿ, ಸಂತೋಷ ಸಲಗರ, ಅಣ್ಣಾರಾಯ ಹಾಬಾಳಕರ, ಪೀರಪ್ಪ,  ರಾಜಶೇಖರ ಕುರಿಕೊಟಾ, ಆನಂದ ಹುಸೇನ್, ಪಾಶಾ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!