Oplus_0

ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತ್ಯೋತ್ಸವ | ಒಳ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ, ಉಗ್ರ ರೂಪದ ಹೋರಾಟಕ್ಕೆ ಸಿದ್ದರಾಗಿ: ಸಂಸದ ಗೋವಿಂದ ಕಾರಜೋಳ ಕರೆ

ನಾಗಾವಿ ಎಕ್ಸಪ್ರೆಸ್ 

ಕಮಲಾಪೂರ: ಭಾರತ ದೇಶಕ್ಕೆ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡಿ ದಲಿತರಿಗೆ 10 ವರ್ಷ ಮೀಸಲಾತಿ ಅವಕಾಶ ನೀಡಿದ್ದರು. ಆ ಮೀಸಲಾತಿಯನ್ನು ನಿರಂತರವಾಗಿ ಮುಂದುವರಿಸುವಲ್ಲಿ ಹಸಿರು ಕ್ರಾಂತಿಯ ಪಿತಾಮಹ ಡಾ. ಜಗಜೀವನ್ ರಾಮ್ ಅವರ ಪರಿಶ್ರಮ ಸಾಕಷ್ಟಿದೆ. ಒಳಮೀಸಲಾತಿಯಲ್ಲಿ ಮಾದಿಗ ಸಮುದಾಯ ಮತ್ತು ಅದರ ಒಳ ಪಂಗಡಗಳಿಗೆ ಅನ್ಯಾಯವಾಗಿದೆ. ನ್ಯಾಯ ಸಿಗಬೇಕೆಂದರೆ ಹೋರಾಟ ಅನಿವಾರ್ಯವಾಗಿದೆ. ಒಳ‌ ಮೀಸಲಾತಿಗಾಗಿ ಸಮಾಜದ ಮುಖಂಡರು ಉಗ್ರರೂಪದ ಹೋರಾಟಕ್ಕೆ ಸಿದ್ದರಾಗಿ ಎಂದು ಸಂಸದ ಗೋವಿಂದ ಕಾರಜೋಳ ಕರೆ ನೀಡಿದರು.

ತಾಲೂಕಿನ ಆಕೃತಿ ಕಲ್ಯಾಣ ಮಂಟಪದಲ್ಲಿ ದಿ. ಜಿ. ರಾಮಕೃಷ್ಣ ಅವರ ವೇದಿಕೆಯಲ್ಲಿ ಭಾನುವಾರ ತಾಲೂಕು ಜಯಂತ್ಯೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಬುದ್ಧ, ಬಸವ, ಅಂಬೇಡ್ಕರ ತತ್ವದಲ್ಲಿ ನಂಬಿಕೆ ಹೊಂದಿದವನು ಸರ್ವರಿಗೂ ಸಮಬಾಳು ಸಮಪಾಲು ತತ್ವದ ಅಡಿಯಲ್ಲಿ ನಂಬಿಕೆ ಇಟ್ಟವನು, ನಾವು ಯಾರ ಹಕ್ಕು ಕಸಿಯುತ್ತಿಲ್ಲ ಸಂವಿಧಾನ ಬದ್ಧ ಹಕ್ಕು ಕೇಳುತ್ತಿದ್ದೇವೆ ಎಂದರು.

ಶಾಸಕ ಬಸವರಾಜ ಮತ್ತಿಮಡು ಮಾತ್ತಿಮಡು ಮಾತನಾಡಿ, ಡಾ.ಬಾಬು ಜಗಜೀವನ್ ರಾಮ್ ಅವರು ದೇಶದ ಆಡಳಿತದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ನಾವೆಲ್ಲರೂ ಶ್ರಮಿಸೋಣ. ಜಯಂತ್ಯುತ್ಸವ ಹೆಸರಲ್ಲಿ ಸಮಾಜವನ್ನು ಎರಡು ಬಣ್ಣಗಳಾಗಿ ಒಡೆಯದೆ ಎಲ್ಲರೂ ಒಗ್ಗಟ್ಟಾಗಿ ಜಯಂತಿ ಆಚರಿಸಬೇಕು ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ಬಾಬೂಜಿಯವರ ಹೋರಾಟ ಮನೋಭಾವ ಸಂಘಟನೆ ಮತ್ತು ಅಭಿವೃದ್ದಿ ಪರ ಮನೋಭಾವ ಬೆಳೆಸಿಕೊಳ್ಳೊಣ, ಸ್ಥಳೀಯವಾಗಿ ದಿ. ಜಿ ರಾಮಕೃಷ್ಣ ಅವರ ಅವಧಿಯಲ್ಲಿ ಹಲವಾರು ಬಗೆಯ ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದು ಸ್ಮರಿಸುತ್ತೇನೆ. ನನಗೆ ಟಿಕೆಟ್ ನೀಡದಿದ್ದರೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದರು.

ಮಾದಿಗ ಸಮಾಜದ ಮುಖಂಡ ಅನೀಲಕುಮಾರ ಬೆಳಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ. ಬಾಬು ಜಗಜೀವನರಾಂ ಅವರು ಪ್ರಬುದ್ಧ ರಾಜನೀತಿ ತಜ್ಞ ಆಗಿದ್ದರು ಜೊತೆಗೆ ಅವರ ಬದುಕು ಆದರ್ಶ. ಅವರ ಜೀವನವೇ ನಮಗೆಲ್ಲ ದಾರಿ ದೀಪವಾಗಿದೆ ಎಂದರು. ಡಾ.ಬಾಬುಜಗಜೀವನರಾಮ್ ಅವರು ಈ ದೇಶದ ಆಹಾರ ಸಚಿವರಾಗಿ, ಭಾರತದ ಜನತೆಗೆ ಹಸಿರು ಕ್ರಾಂತಿ ಯೋಜನೆ ಜಾರಿಗೊಳಿಸುವ ಮೂಲಕ ಈ ದೇಶದ ಜನತೆ ಹಸಿವಿನಿಂದ ಬಳಲದಂತೆ ನೋಡಿಕೊಂಡ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷ ರವಿ ಬಿರಾದಾರ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ ಪಾಟೀಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವಿಠಲ್ ಕಾಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ನಿರಗುಡಿ ಶ್ರೀ ಹವಾ ಮಲ್ಲಿನಾಥ ಮುತ್ಯಾ, ಪ್ರಮುಖರಾದ ಶಿವಶೆಟ್ಟಿ ಪಾಟೀಲ, ಅನೀಲಕುಮಾರ ಬೆಳಕೇರಿ, ಲಿಂಗರಾಜ ತಾರಫೈಲ, ರಾಜು ವಾಡೇಕರ, ಸಿ.ಎ.ಪಾಟೀಲ, ಶ್ಯಾಮ ನಾಟೀಕಾರ, ಗುರುಪಾದಪ್ಪ ಮಾಟೂರ, ತಾಜೋದ್ದಿನ ಪಟೇಲ್, ಅಬ್ದುಲ ಸತ್ತಾರ, ಶಿವಕುಮಾರ ದೊಶೆಟ್ಟಿ, ಸುಖಾನಂದ ಸಿಂಗೆ, ಮಂಜುನಾಥ ನಾಲವಾರಕರ, ದಶರಥ ಕಲಗುರ್ತಿ, ಪ್ರದೀಪ ಭಾವೆ, ನಿಂಗಪ್ಪ ಪ್ರಬುದ್ದಕರ, ಹಣಮಂತ ಹೊಸಮನಿ, ಹಣಮಂತ ಕಟ್ಟಿಮನಿ, ಅರುಣ ದಮ್ಮೂರ, ಅಶೋಕ ಸಿಂಗೆ, ಮನೋಹರ ಚಕ್ರಕರ್, ನಿಜಪ್ಪ ಮಡಕಿ, ಶಿವರಾಜ ಮೂಕಿ, ರಾಜು ಭೂಂಯ್ಯಾರ, ಪಂಡಿತ ಸಿಂಗೆ, ವಿಶ್ವ,ಜೈರಾಜ ಕಿಣಗಿಕರ್, ಆನಂದ ಕಪನೂರ ಮತ್ತಿತರರಿದ್ದರು. ಡಾ. ಚಂದ್ರಕಾಂತ ಸ್ವಾಗತಿಸಿದರು. ಡಾ.ಗೀತಾಂಜಲಿ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!