Oplus_0

ಕನಕಗುರು ಪೀಠದ ಪೀಠಾಧಿಪತಿ ಶ್ರೀ‌ ಸಿದ್ದರಾಮಾನಂದಪುರಿ‌ ಸ್ವಾಮೀಜಿ‌ ನಿಧನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕಂಬನಿ

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ಸಿದ್ದರಾಮಾನಂದಾಪುರಿ ಸ್ವಾಮೀಜಿ (55) ಅವರು ಗುರುವಾರ ಬೆಳಗಿನ ಜಾವ ನಿಧನರಾದ ಸುದ್ದಿ ಕೇಳಿ ಅತೀವ ದುಃಖವಾಯಿತು ಎಂದು ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದಾರೆ.

ಸ್ವಾಮೀಜಿಗಳು ಬಾಲ್ಯದಿಂದಲೇ ಅಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿಕೊಂಡಿದ್ದರು. ರಾಯಚೂರು‌ ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಣಿ‌ ಬ್ರಿಜ್ ಬಳಿ ಕನಕಗುರು ಪೀಠ ಸ್ಥಾಪನೆ ಮಾಡಿ ಪೀಠಾಧಿಪತಿಗಳಾದರು. ಆ ಮೂಲಕ ಸಮಾಜಸೇವೆ, ಉಚಿತ ಶಿಕ್ಷಣ, ದಾಸೋಹ, ಸರ್ವಧರ್ಮ‌‌ ಸಮನ್ವಯತೆ ಮೈಗೂಡಿಸಿಕೊಳ್ಳುವುದರ ಜೊತೆಗೆ ಪ್ರಗತಿಪರ ಚಿಂತನೆಯುಳ್ಳ ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು.

ಅವರ ಸಮಾಜಿಕ ಸೇವೆ, ಸಮಾಜಕ್ಕೆ ಮಾರ್ಗದರ್ಶನ ಮತ್ತಷ್ಟು ಬೇಕಿತ್ತು ಎನ್ನುವ ಸಮಯದಲ್ಲೇ ಶ್ರೀಗಳು ಅಕಾಲಿಕ ನಿಧನ ಹೊಂದಿದ್ದಾರೆ.

ಶ್ರೀಗಳ ಅಕಾಲಿಕ ನಿಧನದಿಂದ ಅವರ ಅಪಾರ ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ನೋವುಂಟು ಮಾಡಿದೆ. ಅವರ ದುಃಖದಲ್ಲಿ ನಾನೂ‌ ಕೂಡಾ ಭಾಗಿಯಾಗಿದ್ದೇನೆ. ಆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!