Oplus_0

ಚಿತ್ತಾಪುರ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ್ ಸ್ಮಾರಕ ಸಿಬಿಎಸ್‌ಇ ಶಾಲೆಗೆ ಶೇ.99 ಫಲಿತಾಂಶ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ವಿಶ್ವಗುರು ಶಿಕ್ಷಣ ಹಾಗೂ ಕಲ್ಯಾಣ ಸಂಸ್ಥೆಯ ಶ್ರೀಮತಿ ಮಹಾದೇವಮ್ಮ ಬಿ. ಪಾಟೀಲ್ ಸ್ಮಾರಕ ಸಿಬಿಎಸ್ಇ ಶಾಲೆ, 2025-26ನೇ ಸಾಲಿನ ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ. 99 ರಷ್ಟು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ ಕರದಾಳ ತಿಳಿಸಿದ್ದಾರೆ.

ಪ್ರೇಮ್ ಕಪಿಲ್ ಜಿತುರೆ ವಿದ್ಯಾರ್ಥಿಯು 472 ಶೇ. 94.40 ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದು, ಚೇತನ್ ಬಸವರಾಜ 465 ಶೇ.93, ಪಡೆಯುವ ಮೂಲಕ ದ್ವೀತಿಯ ಸ್ಥಾನ ಗಳಿಸಿದ್ದಾನೆ.

ಉಳಿದಂತೆ ಎಮ್. ಡಿ. ಅಯಾನ್ ಅಲೀಮ್ ಸಾಬ್ 456 ಶೇ.91.20, ರಕ್ಷಿತಾ ಬಸವರಾಜ 445 ಶೇ.89, ಸೃಷ್ಠಿ ಗುಂಡಪ್ಪಾ 438 ಶೇ.87.60, ಮುನೀಂದ್ರ ಶಿವಕುಮಾರ 420 ಶೇ.84, ಅಖೀಲಾ ಆರ್.ಎಸ್. ರಾಮಾಚಾರ್ಯ ಎಸ್ 414 ಶೇ.82.80, ಆಚಲ್ ಸಚೀನ ಜಿತುರೆ 408 ಶೇ.81.60, ಬಸರೆಡ್ಡಿ ಶರಣರೆಡ್ಡಿ ಇಜಾರ 403 ಶೇ.80.60, ಮಹ್ಮದ ಅಲ್ತಾಫ್ ಶರಫೋದ್ದೀನ್ 400 ಶೇ.80 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಒಟ್ಟು 56 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 56 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್), 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಮತ್ತು 2 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ  ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!