ವೀರಶೈವ ಲಿಂಗಾಯತ ರಾಷ್ಟ್ರೀಯ ಯುವ ಉಪಾಧ್ಯಕ್ಷ ಮಹೇಶ್ ರೆಡ್ಡಿ ಮದ್ನಾಳ ಅವರಿಗೆ ಭಗೀರಥ ಸಮಾಜದ ವತಿಯಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟೀಯ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಅವರಿಗೆ ಜಿಲ್ಲಾ ಭಗೀರಥ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಗರದಲ್ಲಿ ಭಗೀರಥ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಅವರು, ನಾವು ಹೆಚ್ಚಿನ ಸಂಖ್ಯೆಯ ಸಮಾಜದವರು ಇದ್ದರೂ ಸಹ ನಮ್ಮ ತಾತಾ, ದೊಡ್ಡಪ್ಪ ಮತ್ತು ತಂದೆಯವರು ಎಲ್ಲಾ ಸಣ್ಣ ಸಣ್ಣ ಸಮುದಾಯದ ಜನರೊಡನೆ ಬೆರೆತು ಸಾಮರಸ್ಯ ಸಾಧಿಸಿ ಜನ ಮನ್ನಣೆ ಗಳಿಸಿದ್ದರು. ಒಂದೇ ಜಾತಿಯಿಂದ ಜನ ನಾಯಕರಾಗಲು ಸಾಧ್ಯವಿಲ್ಲ. ನಾನೂ ಕೂಡ ನನ್ನ ಸಮಾಜದ ಜೊತೆಗೆ ಎಲ್ಲಾ ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದಲೂ ಸಹಭಾಗಿತ್ವ ಬಯಸುತ್ತೇನೆ. ಬಸವೇಶ್ವರರ ಹಾದಿಯಲ್ಲಿ ನಾವು ನಡೆದಾಗ ಮಾತ್ರ ಎಲ್ಲರಿಂದಲೂ ಮೆಚ್ಚುಗೆ ಗಳಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಾದಗಿರಿ ಭಗೀರಥ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ್ ಕೊಟಗೆರ, ವಿಶ್ವನಾಥ ಗುಡೂರ ಸೇರಿದಂತೆ ಸಮಾಜದ ಎಲ್ಲಾ ಹಿರಿಯ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.

