Oplus_0

ಪಕ್ಷಿಮ ಬಂಗಾಳ, ಆಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿಗೆ ಬಹುಮತ | ಮತ್ತೇ ನಿಜವಾದ ಮಾಲಗತ್ತಿ ಶ್ರೀ ಚೆನ್ನಬಸವ ಶರಣರು ನುಡಿದ ಭವಿಷ್ಯ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪಕ್ಷಿಮ ಬಂಗಾಳ, ಆಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಇಷ್ಟಲಿಂಗ ನಿಷ್ಠರು, ಗುರುಭಕ್ತಿ ಸಂಪನ್ನರು, ಜಂಗಮ ಪ್ರೇಮಿಗಳು, ಅನುಷ್ಠಾನ ಸಂಪನ್ನರು ಆದ ಮಾಲಗತ್ತಿ ಸುಕ್ಷೇತ್ರ ಹಿರೋಡೇಶ್ವರ ದೇವಸ್ಥಾನದ ಪೀಠಾಧಿಪತಿ ಡಾ.ಚೆನ್ನಬಸವ ಶರಣರು ನುಡಿದ ಭವಿಷ್ಯ ಮತ್ತೇ ನಿಜವಾಗಿದೆ.

ಆಸ್ಸಾಂ ರಾಜ್ಯದಲ್ಲಿ 95 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದರು ಅದರಂತೆ 101 ಸ್ಥಾನ ಗೆದ್ದಿದೆ ಹಾಗೂ ಪಕ್ಷಿಮ ಬಂಗಾಳ ರಾಜ್ಯದಲ್ಲಿ 172 ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದರು ಅದರಂತೆ 205 ಸ್ಥಾನ ಗೆದ್ದಿದೆ. ಅಲ್ಲದೇ ಪುದುಚೇರಿ (ಕೇಂದ್ರಾಡಳಿತ ಪ್ರದೇಶ) ರಾಜ್ಯದಲ್ಲಿ ಎನ್’ಡಿಎ ಬಹುಮತ ಬರಲಿದೆ ಎಂದು ಹೇಳಿದರು ಅದರಂತೆಯೇ ಎನ್’ಡಿಎ 30 ಸ್ಥಾನಗಳ ಪೈಕಿ 20 ಸ್ಥಾನ ಪಡೆದು ಬಹುಮತ ಪಡೆದಿದೆ ಹೀಗಾಗಿ ಮಾಲಗತ್ತಿ ಶ್ರೀಗಳ ಭವಿಷ್ಯ ನಿಜವಾಗಿದೆ.

ಕಳೆದ ಭಾನುವಾರ ರಾತ್ರಿ 10 ಗಂಟೆಗೆ ಲಿಂಗಪೂಜೆ ನಂತರ ಭವಿಷ್ಯ ನುಡಿದಿದ್ದರು. ಈ ಹಿಂದೆ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಡಾ.ಉಮೇಶ ಜಾಧವ 95 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದ್ದರು ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಹಾಗೂ ಅಕ್ಕಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಹೇಳಿದ್ದ ಭವಿಷ್ಯ ನಿಜವಾಗಿತ್ತು.

Spread the love

Leave a Reply

Your email address will not be published. Required fields are marked *

You missed

error: Content is protected !!