Oplus_0

ನಾಲವಾರ ಹೋಬಳಿಯ ಗ್ರಾಮಗಳ ರೈತರ ಬೆಳೆ ಪರಿಹಾರದ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ರೈತ ಮುಖಂಡರಿಂದ ತಹಸೀಲ್ದಾರ್ ಗೆ ಮನವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ನಾಲವಾರ ಹೋಬಳಿಯ ಸೂಗೂರ (ಎನ್), ಕುಲಕುಂದಾ, ಮಳಗ(ಎನ್), ತುನ್ನೂರ, ಮಾರಡಗಿ, ರಾಂಪೂರಹಳ್ಳಿ ಗ್ರಾಮಗಳ ರೈತರ ಬೆಳೆ ಪರಿಹಾರದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ರೈತ ಮುಖಂಡರು ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಕೃಷಿ ಸಹಾಯಕ ನಿರ್ದೇಶಕರ ಸಂಜೀವಕುಮಾರ ಮಾನಕರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕೃಷಿಕ ಸಮಾಜ ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ತಾಲೂಕಿನ ನಾಲವಾರ ಹೋಬಳಿಯಲ್ಲಿ ಬರುವ ಸೂಗೂರ (ಎನ್), ಕುಲಕುಂದಾ, ಮಳಗ(ಎನ್), ತುನ್ನೂರ, ಮಾರಡಗಿ, ರಾಂಪೂರಹಳ್ಳಿ ಗ್ರಾಮಗಳ ಮುಂಗಾರು ಬೆಳೆಯನ್ನು ಮೆಳೆಯಿಂದ ಸಂಪೂರ್ಣ ಹಾನಿಯಾಗಿದ್ದು, ಪ್ರತಿಶತ ಶೇ.75 ರಷ್ಟು ರೈತರ ಹೆಸರುಗಳು ಘೋಷಿಸಲ್ಪಟ ಯಾದಿಯಲ್ಲಿ ಬಂದಿರುವುದಿಲ್ಲ, ಹೀಗಾಗಿ ಈ ಭಾಗದ ರೈತರು ಬೆಳೆಹಾನಿ ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.

ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಗಳು ರೈತರಿಗೆ ದೂರು ಸಲ್ಲಿಸಲು ತಿಳಿಸಿದಾಗ ಎಲ್ಲಾ ರೈತರು ಗ್ರಾಮಲೇಕ್ಕಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಕೂಡ ಸದರಿ ವಿಷಯದಲ್ಲಿ ದೂರು ಸರ್ಕಾರಕ್ಕೆ ಸಲ್ಲಿಕ್ಕೆಯಾಗದಿರುವುದು ತಿಳಿದು ಬಂದಿದೆ ಎಂದು ಹೇಳಿದರು.

ತಹಸೀಲ್ದಾರ್ ಹಾಗೂ ತಾಲೂಕು ಕೃಷಿ ಅಧಿಕಾರಿಗಳನ್ನು ಭೇಟಿ ಯಾಗಿ ವಿಷಯ ಗಮನಕ್ಕೆ ತಂದಾಗ ನಾಲವಾರ ಕಂದಾಯ ನಿರೀಕ್ಷಕರು ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯನ್ನು ಕಾಣಲು ತಿಳಿಸಿದಾಗ, ಸದರಿಯವರು ಕೊಲ್ಲೂರಿನ ಮಲ್ಲು ಎನ್ನುವ ಕಂಪ್ಯೂಟರ್ ಅಪರೇಟರಗೆ ಸದರಿ ಗ್ರಾಮಗಳ ಗ್ರಾಮಲೇಖಾಪಾಲಕರ ಜೋತೆಯಾಗಿ ನಮ್ಮ ದೂರನ್ನು ಸಂಬಂಧಪಟ್ಟ ಇಲಾಖೆಗೆ ತಲುಪಿಸಲು ಸೂಚಿಸಿದ ನಂತರ ನಾವು ಎಲ್ಲಾ ರೈತರು ಮತ್ತೊಮ್ಮೆ ದೂರು ಸಲ್ಲಿಸಿದ್ದೇವೆ ಎಂದು ಹೇಳಿದರು.

ಈಗ ಸದ್ಯ ಘೋಷಣೆಯಾಗಿರುವ ಯಾದಿಯಲ್ಲಿ ನಮ್ಮ ಗ್ರಾಮಗಳ ಬಹುತೇಕ 75 ರಿಂದ 80 ಪ್ರತಿಶತ ರೈತರ ಹೆಸರುಗಳೇ ಇಲ್ಲದಿರುವುದು ತಿಳಿದು ಬಂದಿದೆ. ಆದ್ದರಿಂದ ಸದರಿ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ರೈತರಿಗೆ ಅದ ಅನ್ಯಾಯವನ್ನು ಸರಿಪಡಿಸಿ ಶೀಘ್ರದಲ್ಲೆ, ಪರಿಹಾರ ದೊರಕಿಸಿಕೊಡಬೇಕು. ಈ ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸುವಲ್ಲಿ ವಿಳಂಭವಾದಲ್ಲಿ ಅನಿವಾರ್ಯವಾಗಿ ನಾವು ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡರಾದ ಭೀಮರೆಡ್ಡಿ ಕುರಾಳ, ಮಹಿಪಾಲರೆಡ್ಡಿ ಕರಣಿಗಿ, ಶರಣಗೌಡ ಭಾಸರೆಡ್ಡಿ, ಈಸುಗೌಡ ವಡ್ನಳ್ಳಿ, ಶರಣಗೌಡ ಬೆನಕನಳ್ಳಿ, ಚೆನ್ನಬಸಪ್ಪಗೌಡ ದೊಡ್ಡಮನಿ, ಶಾಣಪ್ಪ ಹಳಿಮನಿ, ಶ್ರೀಮಂತ ಭಾವಿ, ಬಸವರಾಜ ಹಡಪದ, ಬಸವರಾಜ ದೊಡ್ಡಮನಿ ಸೇರಿದಂತೆ ಇನ್ನಿತರರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!