Oplus_0

ತೊಗರಿ ಮಂಡಳಿ ಅಧ್ಯಕ್ಷ ಸೈಯದ್ ಮಹಿಮೂದ್ ಸಾಹೇಬ್ ಡೋಣಗಾಂವ ಗ್ರಾಮ ಪಂಚಾಯಿತಿಗೆ ಭೇಟಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಗುರುವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ (ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ) ಅಧ್ಯಕ್ಷ ಸೈಯದ್ ಮಹಿಮೂದ್ ಸಾಹೇಬ್ ಅವರಿಗೆ ಪಂಚಾಯಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ವಿಎಸ್ಸೆಸ್ಎನ್ ತೊಗರಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖರೀದಿ ಕೇಂದ್ರದ ಅಥವಾ ರೈತರಿಗೆ ಸಂಬಂಧಿಸಿದಂತೆ ಏನಾದರೂ ತೊಂದರೆ ಸಮಸ್ಯೆಗಳು ಇದ್ದರೆ ಗಮನಕ್ಕೆ ತನ್ನಿ ನಾನು ಅದಕ್ಕೆ ಪರಿಹಾರ ನೀಡುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಹೊನ್ನಪುರ, ಮಲ್ಲಿಕಾರ್ಜುನ ಹೊನ್ನಪುರ, ಕಾಶಪ್ಪ ಡೋಣಗಾಂವ, ಶರಣಗೌಡ ಪೊಲೀಸ್ ಪಾಟೀಲ, ದೇವು ಹಲಕರ್ಟಿ, ಅಶೋಕ ಬಾನರ್, ಶಿವು ಮೆಂಗಾನೋರ್, ಅಹ್ಮದ್ ಕೊರಬಾ, ಮಹಿಮೂದ್ ಖುರೇಷಿ, ವಿಎಸ್ಸೆಸ್ಎನ್ ಅಧ್ಯಕ್ಷ ಸಿದ್ರಾಮಪ್ಪ ಮೆಂಗಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!