Oplus_0

ಪ್ರಧಾನಿ ಮೋದಿ ಜನ್ಮದಿನಾಚರಣೆ | ಚಿತ್ತಾಪುರ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾರ್ಯಕ್ಕೆ ಅಶೋಕ ಬಗಲಿ ಚಾಲನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸ್ವಚ್ಛತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದರು. ನಮ್ಮ ಮನೆ, ಊರು, ನಗರವನ್ನು ಸ್ವಚ್ಛವಾಗಿಟ್ಟುಕೊಂಡರೆ ದೇಶವೇ ಸ್ವಚ್ಛವಾಗುತ್ತದೆ. ಸ್ವಚ್ಛತೆ ಎಂಬುದು ನಮ್ಮ ಮನಸ್ಸಿನ ಶುದ್ಧೀಕರಣವೂ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಹೇಳಿದರು.

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75 ನೇ ಜನ್ಮದಿನಾಚರಣೆ ನಿಮಿತ್ತ ಶನಿವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೋದಿಜಿ ಅವರ ಜನ್ಮದಿನ ಸೆ. 17 ರಿಂದ ಮಹಾತ್ಮಾ ಗಾಂಧೀಜಿ ಜನ್ಮ ದಿನ ಅಕ್ಟೋಬರ್ 2 ರ ವರೆಗೆ ಜನರಿಗಾಗಿ ವಿವಿಧ ಸೇವೆ ಸಲ್ಲಿಸುವುದರ ಮೂಲಕ ಗೌರವ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ಸೇವಾ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಮ್ಯಾರಥಾನ್, ಗಿಡ ನೆಡುವುದು ಸೇರಿದಂತೆ ಮುಂತಾದ ಸೇವೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ, ವಿಶ್ವ ಕಂಡ ಅಪರೂಪದ ಪ್ರಧಾನಿ ಮೋದಿ ಅವರ ಜನ್ಮದಿನವನ್ನು ವಿವಿಧ ಸೇವೆಗಳೊಂದಿಗೆ ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿಗೆ ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ ಹೀಗಾಗಿ ಇವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಮೋದಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿಯು ದೇಶದಾದ್ಯಂತ ‘ಸೇವಾ ಪಾಕ್ಷಿಕ’ ಆಚರಿಸುತ್ತಿದೆ. ಅದರಂತೆ ಚಿತ್ತಾಪುರದಲ್ಲಿಯೂ ಸ್ವಚ್ಛತಾ ಅಭಿಯಾನ, ಆರೋಗ್ಯ ಶಿಬಿರಗಳ ಆಯೋಜನೆ, ರಕ್ತದಾನ ಶಿಬಿರ, ಅನ್ನದಾಸೋಹ, ಸ್ವದೇಶಿ ಉತ್ಪನ್ನಗಳ ಬಳಕೆಗೆ ಪ್ರೋತ್ಸಾಹ ಸೇರಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಒಳಗೊಂಡಿರುವ ‘ಸೇವಾ ಪಾಕ್ಷಿಕ’ವು ಅಕ್ಟೋಬರ್‌ 2 ರಂದು ಗಾಂಧಿ ಜಯಂತಿ ದಿನ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

ಜಿಲ್ಲಾ ತಂಡದ ಸಂತೋಷ ಹಾದಿಮನಿ, ಗೌರಿ ಚಿತಕೋಟಿ, ವೀರೇಶ ಪಾಟೀಲ ರಾಯಕೋಡ, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೇನೂರ, ನಾಗರಾಜ ಹೂಗಾರ, ಸುರೇಶ ರಾಠೋಡ, ಮಲ್ಲಿಕಾರ್ಜುನ ಇಟಗಿ, ನಾಗರಾಜ ಭಂಕಲಗಿ, ಆನಂದ ಪಾಟೀಲ ನರಿಬೋಳ, ಅಶ್ವತ್ ರಾಠೋಡ, ಅಕ್ಕಮಹಾದೇವಿ, ಶಿವರಾಮ ಚವ್ಹಾಣ, ಪಂಕಜಗೌಡ, ಉದಯ ಸಿಂಪಿ, ಪ್ರಸಾದ್ ಅವಂಟಿ, ರಮೇಶ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಪೂಜಾರಿ, ಕೋಟೇಶ್ವರ ರೇಷ್ಮಿ, ಮಲ್ಲಿಕಾರ್ಜುನ ಬಿಜಾಪುರಕರ್, ರಮೇಶ ಕಾಳನೂರ್ ಸೇರಿದಂತೆ ಕಾರ್ಯಕರ್ತರು ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!