2028 ಕ್ಕೆ ಪ್ರಿಯಾಂಕ್ ಖರ್ಗೆ ಸಿಎಂ: ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಭವಿಷ್ಯ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಪ್ರಿಯಾಂಕ್ ಖರ್ಗೆ ಅವರು ಜನಪ್ರಿಯ ಗೃಹ ಸಚಿವರಾಗಿದ್ದು 2028 ರ ಚುನಾವಣೆಯಲ್ಲಿ ಬಾರಿ ಬಹುಮತದಿಂದ ಮತ್ತೇ ಗೆದ್ದು ಬಂದು ಇಂದು ಗೃಹ ಸಚಿವರಾಗಿದ್ದು ಅಂದು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಗೃಹ, ಇ ಆಡಳಿತ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಕಲಬುರಗಿ ನಗರಕ್ಕೆ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹಳ ಮುಖ್ಯ ಹಾಗೂ ಗಮನಾರ್ಹ ಸಚಿವರಾಗಿದ್ದಾರೆ ಎನ್ನುವುದಕ್ಕೆ ಅವರಿಗೆ ಇಂದು ಸಿಕ್ಕ ಭವ್ಯ ಸ್ವಾಗತ ಸಾಕ್ಷಿಯಾಗಿದೆ ಎಂದರು.
ಗುಲ್ಬರ್ಗಾದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆ ಕೆಲಸ ನಡೆದಿದೆ ಅದಕ್ಕೆ ಸಚಿವರು ರೂ. 17 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಮೂರ್ತಿ ಉದ್ಘಾಟನೆಗೆ ಲಕ್ಷ ಜನರನ್ನು ಸೇರಿಸಲಾಗುವುದು. ಇದರಂತೆ ಬೆಂಗಳೂರಿನ ವಿಧಾನಸೌಧದ ಮುಂದೆ ಅಂಬಿಗರ ಚೌಡಯ್ಯ ನವರ ಮೂರ್ತಿ ಸ್ಥಾಪಿಸುವಂತೆ ಒತ್ತಾಯಿಸಿದರು.
ಕೋಲಿ, ಕಬ್ಬಲಿಗ ಮತ್ತು ಸಮನಾರ್ಥ ಜಾತಿಗಳನ್ನು ಎಸ್ ಟಿ ಗೆ ಸೇರಿಸಬೇಕು. ಅದಕ್ಕೆ ಏನಾದರೂ ಇಚ್ಛಾಶಕ್ತಿ ಇದ್ದರೆ ಅದು ಪ್ರಿಯಾಂಕ್ ಖರ್ಗೆ ಅವರಿಗೆ ಮಾತ್ರ ಎಂದರು.
ಇದಕ್ಕೂ ಮುನ್ನ, ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಾಯಕರು ಸಚಿವರನ್ನು ಗಂಜ್ ಪ್ರದೇಶದ ನಗರೇಶ್ವರ ಶಾಲೆಯ ಬಳಿಯಲ್ಲಿ ಸಚಿವರನ್ನು ಅದ್ದೂರಿಯಾಗಿ ಸ್ವಾಗತಿ, ಭವ್ಯ ಮೆರವಣಿಗೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಗೆ ಕರೆ ತಂದರು.
ಶಾಸಕರಾದ ಎಂ.ವೈ ಪಾಟೀಲ್ ಹಾಗೂ ಅಲ್ಲಮಪ್ರಭು ಪಾಟೀಲ್ ಅವರು ಮಾತಮಾಡಿ, ಪ್ರಿಯಾಂಕ್ ಖರ್ಗೆ ಅವರ ಸಾಮರ್ಥ್ಯಕ್ಕೆ ತಕ್ಕಂತ ಖಾತೆಗಳನ್ನು ಮುಖ್ಯಮಂತ್ರಿ ಗಳು ಕೊಟ್ಟಿದ್ದಾರೆ. ಮೊಟ್ಟಮೊದಲ ಬಾರಿಗೆ ಇ ಆಡಳಿತ ಖಾತೆಯನ್ನು ಸಿಎಂ ಹೊರತುಪಡಿಸಿ ಬೇರೆ ಸಚಿವರಿಗೆ ಕೊಟ್ಟಿರುವುದು ಇದೇ ಮೊದಲ ಬಾರಿ. ಐಟಿ ಬಿಟಿ ಖಾತೆಯನ್ನು ಪ್ರಿಯಾಂಕ್ ಖರ್ಗೆ ಅವರಿಗೆ ಕೊಡುವಂತೆ ಐಟಿ ದಿಗ್ಗಜರೆ ಒತ್ತಾಯಿಸಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಅವರನ್ನು ಉಪಮುಖ್ಯಮಂತ್ರಿ ಮಾಡುವಂತೆ ನಾವೆಲ್ಲ ಒತ್ತಾಯಿಸಿದ್ದೆವು. ಆದರೆ, ಅವರು ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿವೆ ಎಂದರು.
ಈ ಹಿಂದೆ ಸಿಎಂ ಅವರನ್ನು ಕರೆದುಕೊಂಡು ಬಂದು ನೆರೆ ಪರಿಹಾರ ಒದಗಿಸಿಕೊಟ್ಟರು ಈಗ ನಾಳೆ ಸಿಎಂ ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ,ಖರ್ಗೆ ಅವರು ಸಿಎಂ ಅವರಿಂದ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಮೇಲೆ ಶಾಸಕರಾದ ಹಾಗೂ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಬಿ.ಆರ್.ಪಾಟೀಲ್ ಎಂ ವೈ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಮಹಾನಗರ ಪಾಲಿಕೆ ಮೇಯರ್ ವರ್ಷಾ ಜಾನೆ, ಮಹೆಬೂಬ್ ಸಾಹೇಬ್ ಚಿಸ್ತಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು, ಮಹಜರ್ ಆಲಂಖಾನ್, ಪ್ರವೀಣ್ ಪಾಟೀಲ್ ಹರವಾಳ, ಶಿವಾನಂದ್ ಪಾಟೀಲ್, ಆರ್. ಕೆ. ಪಾಟೀಲ್, ನೀಲಕಂಠರಾವ್ ಮೂಲಗೆ, ಸುಭಾಷ್ ರಾಠೋಡ್, ಶರಣಪ್ಪ ಮಟ್ಟೂರು, ಶ್ರೀನಿವಾಸ್ ಸಗರ, ರಾಜಗೋಪಾಲ ಮುದಿರೆಡ್ಡಿ, ಸೋಮಶೇಖರ್ ಗೋನಾಯಕ್, ಡಾ ಕಿರಣ್ ಪಾಟೀಲ್, ಶರಣು ಪಪ್ಪಾ ಸೇರಿದಂತೆ ಹಲವರಿದ್ದರು.

