ಪ್ರಿಯಾಂಕ್ ಖರ್ಗೆ ಡಿಸಿಎಂ ಸ್ಥಾನಕ್ಕಾಗಿ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಯುವ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ, 101 ತೆಂಗಿನ ಕಾಯಿ ಅರ್ಪಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರಕಲಿ ಎಂದು ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ದೇವಿಂದ್ರ ಯಾಬಾಳ ನೇತೃತ್ವದಲ್ಲಿ ಶುಕ್ರವಾರ ವಿಶೇಷ ಪೂಜೆ ಮಾಡಿ ನಂತರ 101 ತೆಂಗಿನ ಕಾಯಿ ಒಡೆದು ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ದೇವಿಂದ್ರ ಯಾಬಾಳ, ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರಾಗಿ ನೋಡಿದ್ದೇವೆ ಈಗ ಉಪ ಮುಖ್ಯಮಂತ್ರಿಯನ್ನಾಗಿ ನೋಡುವ ಅಸಂಖ್ಯಾತ ಕಾರ್ಯಕರ್ತರ, ಅಭಿಮಾನಿಗಳ ಬಹುದೊಡ್ಡ ಕನಸು ಇದೆ. ಹೀಗಾಗಿ ಜಲದುರ್ಗೆ ನಾಗಾವಿ ಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯ ಕಂಡ ಅಪರೂಪದ ನೇರ ನುಡಿಯ ವ್ಯಕ್ತಿತ್ವ ಹೊಂದಿರುವ, ಅಭಿವೃದ್ಧಿ ಪರ ಚಿಂತನೆ ಇರುವ ಯಾವುದೇ ಸ್ಥಾನ ಸಿಕ್ಕರೂ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇರುವ ಪ್ರಿಯಾಂಕ್ ಖರ್ಗೆ, ಈಗಾಗಲೇ ಸಚಿವರಾಗಿ ಚಿತ್ತಾಪುರ ಹಾಗೂ ಕಲಬುರಗಿ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಇವರನ್ನು ರಾಜ್ಯದ ನೂತನ ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಹೈ ಕಮಾಂಡ್ ಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ, ರಾಮಲಿಂಗ ಬಾನರ್, ಹಣಮಂತ ಸಂಕನೂರ, ಭೀಮರಾಯ ಹೊತಿನಮಡಿ, ಶರಣು ಡೋಣಗಾಂವ, ಶಿವಯೋಗಿ ರಾವೂರ, ವಿನ್ನುಕುಮಾರ ಜಡಿ, ಕರಣಕುಮಾರ ಅಲ್ಲೂರ, ಗಂಗಾಧರ ಡಿಗ್ಗಿ, ರವಿಸಾಗರ ಹೊಸಮನಿ, ಮುಜೀಬ್ ಜುನೈದಿ, ಪ್ರದೀಪ್ ಸಿಂಧೆ, ಸಂತೋಷ ಪೂಜಾರಿ, ಸುಭಾಷ್ ಕಲ್ಮರಿ, ಭಾಗಪ್ಪ ದೊರೆ, ಸುಭಾಷ್ ಪವಾರ್, ಭೀಮಾಶಂಕರ ಹೋಳಿಕಟ್ಟಿ, ನರಸಪ್ಪ ಭೋವಿ, ಸೂರಜ್ ಕಲ್ಲಕ್, ಲಕ್ಷ್ಮೀಕಾಂತ ಸಾಲಿ, ಉಮೇಶ್ ಗುತ್ತೇದಾರ್, ಈಶಪ್ಪ ಮಾನೇಗಾರ, ವಿಜಯಕುಮಾರ್ ಶರ್ಮ ಸೇರಿದಂತೆ ಅನೇಕರು ಇದ್ದರು.

