Oplus_0

ಶರಣಪ್ರಕಾಶ ಪಾಟೀಲ ಅವರಿಗೆ ಡಿಸಿಎಂ ಸ್ಥಾನ ನೀಡುವಂತೆ ಆದಿ ಬಣಜಿಗ ಸಮಾಜ ಮನವಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ವೈಧ್ಯಕೀಯ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದ ಸರಳ ಸಜ್ಜನಿಕೆಯ, ನುಡಿದಂತೆ ನಡೆಯುವ, ಕಲ್ಯಾಣ ಕರ್ನಾಟಕ ಭಾಗದ ಕನಸುಗಾರ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ರಾಜ್ಯದ ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಆದಿ ಬಣಜಿಗ ಸಮಾಜದ ಯುವ ಮುಖಂಡ ನಾಗರಾಜ ಸಂಗಾವಿ ದಿಗ್ಗಾಂವ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.

ಡಾ.ಶರಣ ಪ್ರಕಾಶ ಪಾಟೀಲ ರವರು ಆದಿ ಬಣಜಿಗ ಸಮಾಜದ ಹೆಮ್ಮೆಯ ಪುತ್ರ ಧೀಮಂತ ನಾಯಕರಾಗಿದ್ದಾರೆ ಇವರು ನಮ್ಮ ಭಾಗದ ಶ್ರಮಜೀವಿ ನಾಯಕರು, ಕೊಟ್ಟ ಮಾತಿನಂತೆ ಕೆಲಸ ಮಾಡುವ ನಾಯಕರಾಗಿದ್ದು, ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದು ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕೆಲಸಗಳು ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ತಮ್ಮ ಅಭಿವೃದ್ಧಿ ಕೆಲಸಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಹೀಗಾಗಿ ಇವರ ಅಭಿವೃದ್ಧಿ ಪರ ಚಿಂತನೆ, ಪ್ರಾಮಾಣಿಕತೆ ಹಾಗೂ ಸರಳ ವ್ಯಕ್ತಿತ್ವವನ್ನು ಗುರುತಿಸಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹಾಗೂ ದೆಹಲಿ ನಾಯಕರು ಮುಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಘೋಷಿಸಬೇಕು ಇದರಿಂದ ನಮ್ಮ ಸಮಾಜಕ್ಕೆ ದೊಡ್ಡ ನ್ಯಾಯ ದೊರಕಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!