Oplus_0

ರೈತರ ಗುರುತಿನ ಚೀಟಿ ಎಫ್ಐಡಿ ಹಾಗೂ ಬೆಳೆ ಪರಿಹಾರ ದಿನಾಂಕ ವಿಸ್ತರಣೆ ಮಾಡಲು ಜೆಡಿಎಸ್ ಆಗ್ರಹ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ರೈತರ ಗುರುತಿನ ಚೀಟಿ ಎಫ್ಐಡಿ ಹಾಗೂ ಬೆಳೆ ಪರಿಹಾರ ದಿನಾಂಕ ವಿಸ್ತರಣೆ ಮಾಡಬೇಕು ಎಂದು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡರು ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜೆಡಿಎಸ್ ಮಾಜಿ ಕಾರ್ಯಾಧ್ಯಕ್ಷ ಅಂಬಾದಾಸ ಚವ್ಹಾಣ ಮಾತನಾಡಿ, ಚಿತ್ತಾಪುರ ತಾಲೂಕಿನ ರೈತರ ಎಫ್ಐಡಿ ಹಾಗೂ ಬೆಳೆ ಪರಿಹಾರ ಬಹಳಷ್ಟು ಜನರಿಗೆ ಗ್ರಾಮದ ರೈತರಿಗೆ ಆಗಿರುವುದಿಲ್ಲ. ಆದಕಾರಣ ಅಕ್ಟೋಬರ್ 31 ರಂದು ಕೊನೆ ದಿನವಾಗಿದ್ದರಿಂದ ತಾಲೂಕಿನ ಬಹಳಷ್ಟು ರೈತರು ಇದರಿಂದ ವಂಚಿತರಾಗಿದ್ದಾರೆ. ಹೀಗಾಗಿ ಬೆಳೆ ಪರಿಹಾರ ಮತ್ತು ಎಫ್ಐಡಿ ದಿನಾಂಕ ವಿಸ್ತರಿಸಬೇು ಎಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆಡಿಪಿ ಮಾಜಿ ಸದಸ್ಯ ಭೀಮಣ್ಣ ದಂಡಗುಂಡ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!