ರಾಂಪೂರಹಳ್ಳಿ ಗ್ರಾಮದ ಈಡಿಗ ಸಮಾಜದ ಅಧ್ಯಕ್ಷರಾಗಿ ಶ್ರೀನಿವಾಸ್ ಕಲಾಲ್ ಆಯ್ಕೆ | ಜ.6 ರ ಐತಿಹಾಸಿಕ ಪಾದಯಾತ್ರೆಯಲ್ಲಿ ಈಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು: ಪ್ರಣವಾನಂದ ಸ್ವಾಮೀಜಿ ಕರೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಡಿಗ ಸಮಾಜದ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಜ.6 ರಿಂದ ತಾಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ನಡೆಯಲಿರುವ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈಡಿಗರು ಭಾಗವಹಿಸಬೇಕು ಎಂದು ಶಕ್ತಿ ಪೀಠದ ಶ್ರೀ ಡಾ.ಪ್ರಣವಾನಂದ ಮಹಾಸ್ವಾಮಿಗಳು ಕರೆ ನೀಡಿದರು.
ತಾಲೂಕಿನ ರಾಂಪೂರಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಪಾದಯಾತ್ರೆಯ ಪ್ರಯುಕ್ತ ಶುಕ್ರವಾರ ನಡೆದ ಈಡಿಗ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಈಡಿಗರ ಹಕ್ಕಿಗಾಗಿ ಮತ್ತು ನ್ಯಾಯಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಈ ಹೋರಾಟ ಯಾವುದೇ ಸರ್ಕಾರದ ಅಥವಾ ರಾಜಕೀಯ ಪಕ್ಷದ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ ಇದು ಈಡಿಗರ ಹಕ್ಕಿಗಾಗಿ ಎಂದು ಹೇಳಿದರು.
ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕಿದೆ, ಆದ್ದರಿಂದ ಎಷ್ಟೇ ಕೆಲಸದ ಒತ್ತಡ ಇದ್ದರೂ ಒಂದಿಷ್ಟು ಸಮಯ ಸಮಾಜಕ್ಕಾಗಿ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಚಿಂತನೆ ಮಾಡಿದಾಗ ಹಾಕಿಕೊಂಡ ಯೋಜನೆ ಯಶಸ್ವಿಯಾಗಿ ಸಾಧನೆಯ ಹಾದಿಯಲ್ಲಿ ಸಾಗಲಿದೆ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರಾಂಪೂರಹಳ್ಳಿ ಗ್ರಾಮದ ಆರ್ಯ ಈಡಿಗ ಸಮಾಜದ ಅಧ್ಯಕ್ಷರಾಗಿ ಶ್ರೀನಿವಾಸ್ ಕಲಾಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಸಭೆಯಲ್ಲಿ ಉಪ್ಪಾರ ಸಮಾಜದ ಶ್ರೀ ಭಗೀರಥಾನಂದ ಸ್ವಾಮೀಜಿ, ಈಡಿಗ ಸಮಾಜದ ಮುಖಂಡರಾದ ಶ್ರೀಮಂತ ಗುತ್ತೇದಾರ, ಕಾಶಿನಾಥ ಗುತ್ತೇದಾರ, ರವಿ ಸೂಲಹಳ್ಳಿ, ಶಾಂತಯ್ಯ ತರಕಸಪೇಟ್, ಶ್ರೀಶೈಲ ಗುತ್ತೇದಾರ, ರಮೇಶ್ ಗುತ್ತೇದಾರ, ದೇವಪ್ಪ ಗುತ್ತೇದಾರ್, ಸಿದ್ದಯ್ಯ ಕಲಾಲ್, ಮಹಾದೇವಪ್ಪ ಕಲಾಲ್, ರಾಘವೇಂದ್ರ ಕಲಾಲ್, ಮೋನೇಶ್ ಗುತ್ತೇದಾರ್, ತೋಟೇಂದ್ರ ಕಲಾಲ್, ದೇವೇಂದ್ರ ಕಲಾಲ್, ಸಾಬವ್ವ ಕಲಾಲ್, ಶರಣಮ್ಮ ಕಲಾಲ್, ಶಾಂತಮ್ಮ ಕಲಾಲ್, ಪಾರ್ವತಮ್ಮ ಕಲಾಲ್, ಶೇಷಪ್ಪ ಸುಗೂರ್, ಭೀಮರಾಯ ಠಾನಾಗುಂದಿ, ನಾಗರೆಡ್ಡಿ ಮಳಖೇಡ, ಅನಿಲ್ ಮೆತ್ತನ್, ಭಾಗಮ್ಮ ಕಲಾಲ್, ತುಳುಜಮ್ಮ ಕಲಾಲ್, ಗುರಮ್ಮ ಕಲಾಲ್ ಸೇರಿದಂತೆ ಇತರರು ಇದ್ದರು.

