Oplus_0

ಪ್ರತಿಭೆಗಳನ್ನು ಗುರುತಿಸಿ ಹವ್ಯಾಸಿ ರಂಗಭೂಮಿಗೆ ಕರೆತರುವ ಕಾರ್ಯ ಶ್ಲಾಘನೀಯ: ಪರ್ವತಲಿಂಗೇಶ್ವರ ಮಹಾರಾಜ್

ನಾಗಾವಿ ಎಕ್ಸಪ್ರೆಸ್

ಕಾಳಗಿ: ಗ್ರಾಮೀಣ ಭಾಗದಲ್ಲಿ ನಟಿಸಿರುವಂತ ಪ್ರತಿಭೆಗಳನ್ನು ಗುರುತಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಲೆ ಮರಿ ಕಾಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಹವ್ಯಾಸಿ ರಂಗಭೂಮಿಗೆ ಕರೆತರುವಂತ ಶಿವರಾಜ್ ಪಾಟೀಲ ಮತ್ತು  ವೀರಣ್ಣ ಗಂಗಾಣಿ ರಟಕಲ್ ಇವರ ಶ್ರಮ ಮೆಚ್ಚುವಂಥದ್ದು ಎಂದು ಸೋನ್ನಾಲ್ಗಿರಿ ಶ್ರೀ ಪರ್ವತಲಿಂಗೇಶ್ವರ ಮಹಾರಾಜ್ ಶ್ಲಾಘನೀಯ ಎಂದು ಹೇಳಿದರು

ಪಾಪದ ಕಣ್ಣು ಪುಣ್ಯದ ಹೆಣ್ಣು. ಅರ್ಥಾತ್ ನಿನ್ನ ಗಂಡ ನಾನಲ್ಲ ಎಂಬ ನಾಟಕ ಮೂರನೆ ದಿನದ ಪ್ರಯೋಗದ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಇಂಟರ್ನೆಟ್ ಕಾಲದಲ್ಲಿ ನಾಟಕಗಳು ನಶೀಸಿ ಹೋಗುತ್ತಿವೆ ಆದರೆ ಕಾಳಗಿ ತಾಲೂಕು ಶ್ರೀ ರೇವಣಸಿದ್ದೇಶ್ವರ ನಾಟ್ಯ ಸಂಘ ರೇವಗಿ-ರಟಕಲ್ ಗುಡ್ಡದಲ್ಲಿ ರೇಣುಕಾಚಾರ್ಯ ಜಯಂತಿ ರಥೋತ್ಸವದ ಅಂಗವಾಗಿ ಸುಮಾರು ವರ್ಷಗಳಿಂದ ನಡೆದು ಬರುತ್ತಿದ್ದ ನಾಟಕ ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.

ನಾಟಕಗಳು ಜೀವಂತವಾಗಿ ಬಂದಿರುವುದರಿಂದ ಹತ್ತಾರು ಕುಟುಂಬಗಳು ಬದುಕುತ್ತಿವೆ, ಟೆಂಟಿನ ಮಾಲೀಕರು ಕಲಾವಿದರಾಗಿರಬಹುದು, ಕಾರ್ಮಿಕರಾಗಿರಬಹುದು ಹೀಗೆ ಹತ್ತಾರು ಕುಟುಂಬಗಳಿಗೆ ಆಸರೆಯಾಗಲಿದೆ ಎಂದರು.

ಉದ್ಯಮಿ ಡಾ. ಮಲ್ಲಿಕಾರ್ಜುನ ಗಾಜರೆ ಮಾತನಾಡಿ, ನಾಟಕಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕವಿ ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಕಲಾವಿದ ವೀರಣ್ಣ ಗಂಗಾಣಿ ಮಾತನಾಡಿ, ಕಣ್ಮರೆಯಾಗಿ ಹೋಗುತ್ತಿರುವ ನಾಟಕಗಳನ್ನು ಮತ್ತು ಜನಪದ ಗೀಗೀಪದ ಡಪಿನಾಟ ಇವುಗಳು ಉಳಿಸಿ ಬೆಳೆಸಬೇಕು, ಇದು ಮೊಬೈಲು ಜಮಾನದಲ್ಲಿ ಥೆಟರಗಳಿಗೆ ಹೋಗದೆ ನಾಟಕ ನೋಡಲು ಸಾವಿರಾರು ಜನ ರಾತ್ರಿ ಇಡೀ ನಾಟಕ ನೋಡಿ ಪ್ರೋತ್ಸಾಹಿಸುತ್ತಾರೆ ಎಂದರೆ ನಿಜಕ್ಕೂ ನಮ್ಮ ಭಾಗದಲ್ಲಿ ಇನ್ನೂ ಕಲೆ ಜೀವಂತವಾಗಿದೆ ಅನ್ನೋದಕ್ಕೆ ಇದು ಒಂದು ನಾಟಕ ಉದಾಹರಣೆ ಎಂದು ಹೇಳಿದರು.

ಎಲ್ಲರೂ ಹೀಗೆ ಕಲಾವಿದರನ್ನು ಪ್ರೋತ್ಸಾಹಿಸಿ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಹೆಸರು ತರುವುದಕ್ಕೆ ಸಹಕಾರ ನೀಡಬೇಕು ಮತ್ತು ಕವಿಗಳಿಗೆ, ಕಲಾವಿದರಿಗೆ ಸರ್ಕಾರ ಪ್ರತಿ ತಿಂಗಳು ಸಹಾಯಧನವನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ನಾಟ್ಯ ಸಂಘದ ಅಧ್ಯಕ್ಷ ಚಂದ್ರಪ್ಪ ಮಾಸ್ಟರ್ ಗೌರವಧ್ಯಕ್ಷ ಅಜೀಂ ಪಟೇಲ್, ಉಪಾಧ್ಯಕ್ಷ ವೀರಣ್ಣ ಗಂಗಾಣಿ, ಕಾರ್ಯಧ್ಯಕ್ಷ ದತ್ತಾತ್ರೇಯ ರಾಯ್ ಗೋಳ, ಮಾಲೀಕರಾದ ಶಿವರಾಜ ಪಾಟೀಲ, ಕವಿಗಳಾದ ದಿವಾಕರ್ ಜೋಶಿ ಇನ್ನು ಅನೇಕ ನಾಟ್ಯ ಸಂಘದ ಮಾಲೀಕರು, ಕಲಾವಿದರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!