ನಾಗಾವಿ ಯಲ್ಲಮ್ಮ ಹುಂಡಿಯಲ್ಲಿ ಕೊರಿಯಾ, ಕೆನಡಾ, ಯುಎಇ, ಅಮೇರಿಕ ದೇಶದ ಹಣ ಪತ್ತೆ | ಆಶ್ಚರ್ಯಗೊಂಡ ನಾಗಾವಿ ನಾಡಿನ ಜನತೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆ ಸಮಯದಲ್ಲಿ ವಿದೇಶಿ ಹಣ ಪತ್ತೆಯಾಗಿದ್ದು ನಾಗಾವಿ ನಾಡಿನ ಜನತೆ ಆಶ್ಚರ್ಯಗೊಂಡಿದ್ದಾರೆ.
ದೇವಸ್ಥಾನದ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಕೊರಿಯಾ, ಕೆನಡಾ, ಯುಎಇ, ಅಮೇರಿಕ ದೇಶದ ಹಣ ಹುಂಡಿಯಲ್ಲಿ ಜಮಾ ಆಗಿರುವುದು ಕಂಡುಬಂದಿದೆ.
ಕೋರಿಯಾ 10 ಸಾವಿರ, ಭಾರತೀಯ ಹಣ 690 ರೂ, ಕೆನಡಾ 5 ಸಿಂಕ್ ಡಾಲರ್ ಭಾರತೀಯ ಹಣ 477 (ರೂ, 1 ಸಿಂಕ್ ಡಾಲರ್ 95.44 ರೂ.ಸಮ), ಯುಎಇ 5 ದಿರಾಮ್ಸ್ ಪ್ಲಸ್ 10 ದಿರಾಮ್ಸ್ ಭಾರತೀಯ ಹಣ 129.81 ರೂ ಪ್ಲಸ್ 259.62 ರೂ. (1 ದಿರಾಮ್ಸ್ 25.96 ರೂ. ಸಮ). ಅಮೇರಿಕಾ ಡಾಲರ್ 1×13=1151.4 ರೂ, 5×12=5757 ರೂ, 10×6=5757 ರೂ, 20×1=1919 ರೂ, ಒಟ್ಟು 14584.4 ರೂ. ಅಮೇರಿಕಾ ಕಾಯಿನ್ಸ್ ಅಂದಾಜು 1 ಸಾವಿರ ರೂಪಾಯಿ ಸೇರಿದಂತೆ ಒಟ್ಟು ರೂ.17140.91 ಜಮಾ ಆಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷದ ಹುಂಡಿ ಎಣಿಕೆಯ ಸಂದರ್ಭದಲ್ಲೂ ವಿದೇಶಿ ಹಣ ಪತ್ತೆ ಆಗಿತ್ತು. ಈ ವರ್ಷವೂ ನಾಲ್ಕೈದು ದೇಶಗಳ ಕರೆನ್ಸಿ ಪತ್ತೆ ಆಗಿರುವುದು ಭಕ್ತಸಮೂಹದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ನಾಗಾವಿ ಯಲ್ಲಮ್ಮ ದೇವಿಯ ಭಕ್ತರು ವಿದೇಶಗಳಲ್ಲಿಯೂ ಇದ್ದಾರೆ ಎನ್ನುವುದು ಗೋಚರಿಸಿದೆ.

