ಶಹಾಪುರದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್

ಶಹಾಪುರ: ರೈತರಿಗೆ ಸಮರ್ಪಕವಾದ ಯೂರಿಯಾ, ಡಿಎಪಿ ರಸಗೊಬ್ಬರಗಳನ್ನು ವಿತರಿಸುವಲ್ಲಿ ವಿಫಲವಾದ ರೈತ ದ್ರೋಹಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಕೃಷ್ಣ ಭೈರೇಗೌಡ ನಡೆಯನ್ನು ಖಂಡಿಸಿ ನಗರದಲ್ಲಿ‌ ಬಿಜೆ‌ಪಿ‌ ಜಿಲ್ಲಾಧ್ಯಕ್ಷ ಬಸವರಾಜಪ್ಪ ಗೌಡ್ ವಿಭೂತಿಹಳ್ಳಿ ಹಾಗೂ ಮತಕ್ಷೇತ್ರದ ಬಿಜೆಪಿ ನಾಯಕ ಅಮೀನರಡ್ಡಿ ಯಾಳಗಿ‌ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ‌ ಮೆರವಣಿಗೆ ನಡೆಯಿತು.

ಈ ಸಂದರ್ಭದಲ್ಲಿ ನಗರ‌‌ ಮಂಡಲ ಅಧ್ಯಕ್ಷ ಚಂದ್ರಶೇಖರ ಯಾಳಗಿ, ಗ್ರಾಮೀಣ‌‌ ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ಜಿಲ್ಲಾ‌ ರೈತ ಮೋರ್ಚಾ ಅಧ್ಯಕ್ಷರಾದ ದುರ್ಗಪ್ಪ‌ ಯಳಿಮೇಳಿ, ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ‌ ಕೋನೆರ,‌ ಜಿಲ್ಲಾ ಕಾರ್ಯದರ್ಶಿ ದಾಮು ಪವಾರ, ಹಿರಿಯ ಮುಖಡರಾದ ಶಿವರಾಜ ದೇಶಮುಖ, ಡಾ. ಚಂದ್ರಶೇಖರ ಸುಬೇದಾರ, ಮಲ್ಲಿಕಾರ್ಜುನ ಕಂದಕೂರ, ಬಸವರಾಜ ಆರುಣಿ, ಅಶೋಕ‌ ಮಲ್ಲಾಬಾದಿ, ಮಂಡಲ ಪ್ರ,ಕಾರ್ಯದರ್ಶಿಗಳಾದ ಕರಬಸಪ್ಪ ಸಾಹು ಬಿರಾಳ, ವೆಂಕಟೇಶ ಗೌನಳ್ಳಿ ಹಾಗೂ ನಗರ ಮತ್ತು ಗ್ರಾಮೀಣ ಮಂಡಲದ‌ ಎಲ್ಲ ಸ್ಥರದ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು, ರೈತ ಬಾಂಧವರು, ರೈತ ಪರ ಚಿಂತಕರು ಸಾರ್ವಜನಿಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!