ಚಿತ್ತಾಪುರ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಶೋಕ ನಿಪ್ಪಾಣಿ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ತಾಪುರ ಅವರ ನಿರ್ದೇಶನದಂತೆ ಶ್ರೀ ಶರಣಬಸವೇಶ್ವರ ಜೀರ್ಣೋದ್ಧಾರ ಹಾಗೂ ಸೇವಾ ಟ್ರಸ್ಟ್ ವರುಣ ನಗರ ಚಿತ್ತಾಪುರ ವತಿಯಿಂದ ನಡೆಯುವ 2026 ನೇ ಸಾಲಿನ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಅಶೋಕ ನಿಪ್ಪಾಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ತಿಳಿಸಿದ್ದಾರೆ.
ಚಿತ್ತಾಪುರ ವರುಣ ನಗರದ ಶ್ರೀ ಶರಣಬಸವೇಶ್ವರರ 2026 ನೇ ಸಾಲಿನ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ವಿಶೇಷ ಪ್ರವಚನ ಹಾಗೂ ದೇವಸ್ಥಾನ ಅಭಿವೃದ್ಧಿಯ ದೃಷ್ಠಿಯಿಂದ ನಡೆಯುವ ವಿಶೇಷ ಕಾರ್ಯಕ್ರಮಕ್ಕಾಗಿ ಸಮಸ್ತ ಸದ್ಭಕ್ತ ಬಳಗಕ್ಕೆ ಸ್ವಾಗತ ಕೋರಲು ಈ ವರ್ಷದ ಜಾತ್ರಾ ಮಹೋತ್ಸವ ಸ್ವಾಗತ ಸಮಿತಿಗೆ ಅಶೋಕ ನಿಪ್ಪಾಣಿ ಅವರನ್ನು ಸಮಾಜದ ಹಿರಿಯರ ಆಪೇಕ್ಷೇಯಂತೆ ಭಾನುವಾರ ಸಭೆ ನಡೆಸಿ ಆಯ್ಕೆ ಮಾಡಲಾಗಿದ್ದು, ಎಲ್ಲರೂ ಅವರನ್ನು ಬೆಂಬಲಿಸಿ ಈ ವರ್ಷದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಆನಂದ ಪಾಟೀಲ್ ನರಬೋಳಿ, ಟ್ರಸ್ಟ್ ಅಧ್ಯಕ್ಷ ವಿಜಯಕುಮಾರರೆಡ್ಡಿ ದೇಶಮುಖ, ಪ್ರಮುಖರಾದ ಶಿವುರೆಡ್ಡಿ ಪಾಲಪ್, ಚಂದ್ರಶೇಖರ ಸಾತನೂರು, ಚಂದ್ರಶೇಖರ ಉಟಗೂರ, ಅನೀಲ್ ವಡ್ಡಡಗಿ, ಬಸವರಾಜ ಸಂಕನೂರ, ಶಿವನರೆಡ್ಡಿ ಗಡಪ್ಪಗೌಡ, ಕೋಟೇಶ್ವರ ರೇಷ್ಮಿ, ಅಂಬರೀಷ್ ಸುಲೇಗಾಂವ, ಮಹಾದೇವ ಅಂಗಡಿ, ರವಿ ಗೊಬ್ಬರ ಸೇರಿದಂತೆ ಇತರರು ಇದ್ದರು.

