Oplus_0

ನವರಾತ್ರಿ ಉತ್ಸವದ ಪ್ರಯುಕ್ತ | ತುಕಾರಾಮ ನಾಯಕ ಏರಿಯಾದಲ್ಲಿ ಜಯಸಿಂಹ ಮೆಲೋಡಿಸ್ ಬಿಜಾಪುರ ವತಿಯಿಂದ ರಸಮಂಜರಿ ಕಾರ್ಯಕ್ರಮ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ ಜೈ ಮಾತಾದಿ ನವರಾತ್ರಿ ಉತ್ಸವ ಸಮಿತಿ ತುಕಾರಾಮ ನಾಯಕ ಏರಿಯಾ ವತಿಯಿಂದ ಜಯ ಸಿಂಹ ಮೆಲೋಡಿಸ್ ಬಿಜಾಪುರ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಬಾಬುರಾವ್ ಚವ್ಹಾಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್, ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ರಮೇಶ ಬೊಮ್ಮನಳ್ಳಿ, ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕರದಳ್ಳಿ, ಶಾಂತಕುಮಾರ ಹತ್ತಿ, ಅನಿಲ್ ವಡ್ಡಡಗಿ, ಮಲ್ಲಿಕಾರ್ಜುನ ಪೂಜಾರಿ, ತಾಂಡಾದ ನಾಯಕರಾದ ತುಕಾರಾಮ ಖೀರು ನಾಯಕ, ರವೀಂದ್ರ ನಾಯಕ, ರಾಮ ನಾಯಕ, ಯಂಕು ಕನ್ನು ನಾಯಕ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನಿಲ ಶಂಕರ ಚವ್ಹಾಣ ವಹಿಸಿದ್ದರು, ಗೋಪಾಲ್ ರಾಠೋಡ, ಧನರಾಜ ಯಾದವ, ರವಿ ರಾಠೋಡ, ವಿಜಯ ಚವಾಣ್, ಕುಮಾರ್ ಫೋಟೋ ಸ್ಟುಡಿಯೋ, ನಾಗೇಂದ್ರ ಖುಬ್ಬು ರಾಠೋಡ, ವೆಂಕಿ ಜಾಧವ, ರಮೇಶ ಪವಾರ, ರಾಜು ಸಿ ರಾಠೋಡ, ಲಕ್ಷಮಣ ಪಾಂಡು, ವಿಠ್ಠಲ ರಾಠೋಡ, ಅಶೋಕ ಪೂಜಾರಿ, ಶಿವರಾಮ ಚವ್ಹಾಣ ಸೇರಿದಂತೆ ಇತರರು ಇದ್ದರು.

ಜಯಸಿಂಹ ಮೆಲೋಡಿಸ್ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು ಹಾಗೂ ವೆಂಕಿ ಜಾಧವ ಅವರು ಅದ್ಭುತ ನಾಟಕ ಪ್ರದರ್ಶನ ಮಾಡಿ ತೋರಿಸಿದರು. ಕಾರ್ಯಕ್ರಮದ ನಿರೂಪಣೆ ನಿರ್ಮಲಾ ಕುಮಾರ ರಾಠೋಡ ಮಾಡಿದರು, ಆಕಾಶ ಸೆವು ಚವ್ಹಾಣ ಸ್ವಾಗತ ಮಾಡಿದರು,  ಅಶ್ವಥ್ ರಾಠೋಡ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!