ವೋಟ್ ಚೋರ್ ಗದ್ದಿ ಚೋಡ್ ಅಭಿಯಾನದ ಸಹಿ ಸಂಗ್ರಹಕ್ಕೆ ಭೀಮಣ್ಣ ಸಾಲಿ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವೋಟ್ ಚೋರ್ ಗದ್ದಿ ಚೋಡ್ ಅಭಿಯಾನದ ಅಂಗವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 2000 ಸಹಿಗಳು (ಪ್ರತಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕನಿಷ್ಠ 1000 ಸಹಿಗಳಂತೆ) ಸಂಗ್ರಹಿಸಿ ಕೆ.ಪಿಸಿ.ಸಿ.ಗೆ ಸಲ್ಲಿಸಲು ಸೂಚಿಸಿರುವ ಪ್ರಯುಕ್ತ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸಹಿ ಸಂಗ್ರಹ ಅಭಿಯಾನಕ್ಕೆ ಅಧ್ಯಕ್ಷ ಭೀಮಣ್ಣ ಸಾಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಬೀಣ್ಣಿ, ತಾಪಂ ಮಾಜಿ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ, ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ರಸೂಲ್ ಮುಸ್ತಫಾ, ಜಗದೀಶ್ ಚವ್ಹಾಣ, ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್, ಒಬಿಸಿ ಅಧ್ಯಕ್ಷ ನಾಗಯ್ಯ ಗುತ್ತೇದಾರ ಕರದಾಳ, ಮಹಿಳಾ ಅಧ್ಯಕ್ಷೆ ಸಪ್ನಾ ಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಯುವ ಅಧ್ಯಕ್ಷ ದೇವು ಯಾಬಾಳ, ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಈರಪ್ಪ ಭೋವಿ, ಎಂ.ಎ.ರಷೀದ್, ಸೂರ್ಯಕಾಂತ ಪೂಜಾರಿ, ಬಸಣ್ಣ ತಳವಾರ, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಮಲ್ಲಿಕಾರ್ಜುನ ಮುಡಬೂಳಕರ್, ನಜೀರ್ ಆಡಕಿ, ಖಾಜಾ ಬಾದಲ್, ಸಂತೋಷ ಪೂಜಾರಿ, ಸೋಮು ಟೋಕಾಪೂರ, ಸುಭಾಶ್ಚಂದ್ರ ಪವಾರ, ಬಸವರಾಜ ಮುಡಬೂಳ, ಗಂಗಾಧರ್ ಡಿಗ್ಗಿ, ಸೂರಜ್ ಕಲ್ಲಕ್ ಸೇರಿದಂತೆ ಇತರರು ಇದ್ದರು.

