ವಾಡಿ ಪುರಸಭೆಗೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿ ನಿಯೋಜಿಸುವಂತೆ ಮುಕ್ಕನಾಳ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಪುರಸಭೆಯಲ್ಲಿ ಪ್ರಸ್ತುತ ಇರುವ ಮುಖ್ಯಾಧಿಕಾರಿಗಳು ವರ್ಗಾವಣೆಯಾಗಿದ್ದು ಇವರ ಸ್ಥಾನಕ್ಕೆ ಐಎಎಸ್ ಅಥವಾ ಕೆಎಎಸ್ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಎಸ್ ಮುಕ್ಕನಾಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ವಾಡಿ ಪುರಸಭೆ ಕಾರ್ಯಾಲಯದಲ್ಲಿ ಪ್ರಸ್ತುತ ಮುಖ್ಯಾಧಿಕಾರಿ ವರ್ಗಾವಣೆಯಾಗಿದೆ ಹೀಗಾಗಿ ಈ ಸ್ಥಾನಕ್ಕೆ ಜನಪರ ಕಾಳಜಿ ಹಾಗೂ ಅಭಿವೃದ್ಧಿ ಮಾಡುವಂತಹ ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳನ್ನು ನಿಯೋಜಿಸಬೇಕು. ಇದರಿಂದ ಪಟ್ಟಣದ ಅಭಿವೃದ್ಧಿ ಜೊತೆಗೆ ಜನರಿಗೆ ಸರ್ಕಾರಿ ಎಲ್ಲಾ ಸೌಲಭ್ಯಗಳನ್ನು ದೊರೆಕಿಸುವಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪುರಸಭೆಗೆ ಚುನಾವಣೆಯು ಸಹ ನಡೆದಿರುವುದಿಲ್ಲ, ಇಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದೆ, ಹೀಗಾಗಿ ಐಎಎಸ್ ಅಥವಾ ಕೆಎಎಸ್ ಉನ್ನತ ಮಟ್ಟದ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.

