Oplus_0

ಅರಣ್ಯ ಇಲಾಖೆ ವತಿಯಿಂದ ಎರಡು ದಿನದ ಚಿಣ್ಣರ ವನದರ್ಶನ ಪ್ರವಾಸಕ್ಕೆ ವಿಜಯಕುಮಾರ್ ಬಡಿಗೇರ್ ಚಾಲನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಅರಣ್ಯ ವಲಯ ಚಿತ್ತಾಪುರ ವತಿಯಿಂದ ಎರಡು ದಿನದ ಚಿಣ್ಣರ ವನದರ್ಶನ ಬೀದರ್ ಜಿಲ್ಲೆಯ ಕೃಷ್ಣ ಮೃಗ ಸಂರಕ್ಷಿತ ಪ್ರದೇಶ ಮತ್ತು ಅರಣ್ಯ ಪ್ರದೇಶಗಳಲ್ಲಿ ತೆರಳುವ ಪ್ರವಾಸದ ಕಾರ್ಯಕ್ರಮಕ್ಕೆ ಅರಣ್ಯ ವಲಯ ಅಧಿಕಾರಿ ವಿಜಯಕುಮಾರ ಬಡಿಗೇರ್ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಮಕ್ಕಳಿಗೆ ಅರಣ್ಯ ಮತ್ತು ವನ್ಯಜೀವಿ ಬಗ್ಗೆ ತಿಳಿಹೇಳುವ ಸಲುವಾಗಿ ಇಲಾಖೆ ವತಿಯಿಂದ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸದಸ್ಯ ಶರಣು ಡೋಣಗಾಂವ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಹೊನ್ನಪೂರ, ಎಸ್ಡಿಎಂಸಿ ಅಧ್ಯಕ್ಷ ಕಾಶಪ್ಪ ಜೆರ್ಕನೂರ್, ವಿಎಸ್ಎಸ್ಎನ್ ಸೊಸೈಟಿಯ ಅಧ್ಯಕ್ಷ ಸಿದ್ದರಾಮ ಮೆಂಗನೋರ, ಮಾರ್ತಾಂಡ ಪೂಜಾರಿ, ರವಿ ಪೂಜಾರಿ, ನಾಗಪ್ಪ ನಾಗಪ್ಪ ಬಾನರ್, ಶಾಲಾ ಮುಖ್ಯ ಗುರು ವಿನೋದ ಗೌಳಿ, ಶಿಕ್ಷಕರಾದ ಹೀರಾಲಾಲ್, ರಾಜಶೇಖರ, ಮಹಾಲಕ್ಷ್ಮಿ , ಲಕ್ಷ್ಮಿ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಶ್ರೀಕಾಂತ್, ಚಂದ್ರಕಾಂತ್, ತುಕಾರಾಮ, ಜಾಫರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!