ವಾಡಿಯಲ್ಲಿ ವಿಶ್ವ ಪರಿಸರ ದಿನಾಚರಣೆ | ತಾಯಿ ಹೆಸರಲ್ಲಿ ಒಂದು ಗಿಡ ಹಚ್ಚಿ ವಿಶ್ವ ಪರಿಸರ ದಿನ ಆಚರಿಸಿ: ಯಾರಿ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಕ್ರವಾರ ಸಾಲು ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಪ್ರಕೃತಿ ಯಾವುದೇ ನಿರೀಕ್ಷೆ ಇಲ್ಲದೆ ನಮ್ಮ ಹೆತ್ತ ತಾಯಿ ಹಾಗೆ ಆರೋಗ್ಯದ ಬದುಕು ನೀಡುತ್ತದೆ, ಅದಕ್ಕಾಗಿ ನಾವು ಇಂದು ತಾಯಿ ಹೆಸರಲ್ಲಿ ಒಂದು ಗಿಡ ಹಚ್ಚಿ ವಿಶ್ವ ಪರಿಸರ ದಿನ ಆಚರಿಸಿ ಸೃಷ್ಟಿಗೆ ಕೃತಜ್ಞತೆ ಹೆಳೋಣ ಎಂದರು.
ಇಂತಹ ಕೈಗಾರಿಕಾ ಯುಗದಲ್ಲಿ ಜಲ ಮಾಲಿನ್ಯ, ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯಗಳಿಂದ ವಾತಾವರಣ ಸಂಪೂರ್ಣ ಹದಗೆಟ್ಟು ಹೋಗುತ್ತಿದೆ. ಈ ವ್ಯವಸ್ಥೆ ಹೀಗೇ ಮುಂದುವರಿದರೆ ನಮ್ಮ ದುರಂತಕ್ಕೆ ನಾವೇ ಹೋಣೆಯಾಗಬೇಕಾಗುತ್ತದೆ. ಆದ್ದರಿಂದ ನಾವೆಲ್ಲರೂ ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸಕ್ಕೆ ಮುಂದಾಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಪರಿಸರ ಮಾಲಿನ್ಯದಂತಹ ದುಷ್ಪರಿಣಾಮದಿಂದ ಅದೇಷ್ಟೋ ಜನ ನಾನಾ ರೋಗ, ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯವಂತ ನಾಡು, ಸದೃಢವಾದ ಜನತೆ ಬೆಳೆಯಲು ಪರಿಶುದ್ಧ ಪರಿಸರದ ಅವಶ್ಯಕತೆ ಬಹಳಷ್ಟಿದೆ ಹೀಗಾಗಿ ಪ್ರತಿಯೊಬ್ಬರು ಸಸಿಗಳನ್ನು ಮಕ್ಕಳಂತೆ ಲಾಲನೆ, ಪಾಲನೆ, ಪೋಷಣೆ ಮಾಡಿ ಪರಿಸರ ಸಂರಕ್ಷಣೆಗೆ ಪಣತೊಡಬೇಕು. ಅಂದಾಗ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕೆ ದಾರಿ ಆಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಗೋರ್ ಸೇನಾದ ರಾಜಾಧ್ಯಕ್ಷ ರವಿ ಕಾರಬಾರಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಮ್ ಡಿ ತಮಜೀದ್, ಶ್ರೀ ರಾಮ ಸೇನಾ ತಾಲೂಕು ಅಧ್ಯಕ್ಷ ವಿಶ್ವರಾಧ್ಯ ತಳವಾರ, ಮುಖಂಡರಾದ ರವಿಕುಮಾರ ಸಿಂದಗಿ, ಮಲ್ಲಿಕಾರ್ಜುನ ಆಣಿಕೇರಿ, ಜಯಂತ ಪವಾರ, ಪ್ರೇಮ ರಾಠೋಡ, ಆಕಾಶ ಉಪ್ಪಿನ,ರಮೇಶ ಜಾಧವ, ಸುನಿಲ ರಾಠೋಡ, ಸಮುದಾಯ ಕೇಂದ್ರದ ಸಿಬ್ಬಂದಿಗಳಾದ ಗೋವಿಂದ ಮೂರ್ತಿ, ಬಾಬುರಾವ ಭೀಮನಳ್ಳಿ, ಪಾಂಡುರಂಗ ಕೊತಲಾಪುರ, ಕೃಷ್ಣ ಹುಲಿಕರ್, ಮಂಜುಳಾ ಗುಡುಬಾ, ರೇಷ್ಮಾ ನಲಿ, ನಿರ್ಮಲ ವಿಲಿಯಮ್, ನೀಲಮ್ಮ ಪುಜಾರಿ, ಸವಿತಾ ಮೇತ್ರೆ, ಪೂಜಾ ಮೈನಾಳಕರ್, ವಿಜ್ಜುಬಾಯಿ ಪವಾರ, ಲಕ್ಷ್ಮಣ ಚವ್ಹಾಣ, ಸೂರ್ಯಕಾಂತ ಹೇರೊರ, ಜಯಕುಮಾರ ಚವ್ಹಾಣ, ರಮೇಶ ಮಡಿವಾಳ, ರಬೇಕಾ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

