ವಿಕಸಿತ ಭಾರತ ಸಂಕಲ್ಪ ಸಭೆ, ಮೋದಿ ಅಂತಹ ಒಳ್ಳೆಯ ವ್ಯಕ್ತಿತ್ವ, ನಕ್ಷತ್ರ ನಮ್ಮ ದೇಶಕ್ಕೆ ಸಿಕ್ಕಿರುವುದು ಪುಣ್ಯ: ಡಾ. ವೀರೇಶ್ ಜಾಕಾ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಭಾರತದ ಪ್ರಧಾನ ಮಂತ್ರಿ ಆದಮೇಲೆ ಅಭಿವೃದ್ಧಿ ಪರ್ವ ಆರಂಭವಾಗಿದೆ, ಒಂದು ಒಳ್ಳೆಯ ವ್ಯಕ್ತಿತ್ವ, ನಕ್ಷತ್ರ ನಮ್ಮ ದೇಶಕ್ಕೆ ಸಿಕ್ಕಿರುವುದು ಪುಣ್ಯ ಎಂದು ಡಾ. ವೀರೇಶ್ ಜಾಕಾ ಹೇಳಿದರು.
ನಗರದ ಎನ್’ವಿಎಂ ಸಭಾಂಗಣದಲ್ಲಿ ವೃತ್ತಿಪರರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ಸರ್ವರಿಗೂ ಶೌಚಾಲಯ ನಿರ್ಮಾಣದ ಗುರಿ ಮಾಡಿರುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ದೂರವಾಗಿವೆ, ಬಯಲು ಪ್ರದೇಶಗಳಲ್ಲಿ ಶೌಚಾಲಯಕ್ಕೆ ಹೋಗುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಬರುತ್ತಿದ್ದವು. ಜನ ಔಷಧಿ ಮಳಿಗೆಗಳಿಂದ ಅನೇಕ ಬಡವರಿಗೆ ತುಂಬಾ ಅನುಕೂಲವಾಗಿದೆ ಹಿಂದುಳಿದ ಜಿಲ್ಲೆಗಳನ್ನು ಹೆಚ್ಚಿನ ಆದ್ಯತೆ ಪ್ರಧಾನಿ ನರೇಂದ್ರ ಮೋದಿಯವರು ನೀಡುತ್ತಿದ್ದಾರೆ ರಾಯಚೂರು ಯಾದಗಿರಿ ಜಿಲ್ಲೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ಹೇಳಿದರು
ಬಿಜೆಪಿ ಯುವ ಮುಖಂಡ ಉದ್ಯಮಿ ಮಹೇಶ್ ರೆಡ್ಡಿ ಮುದ್ನಾಳ ಮಾತನಾಡಿ, ಭಾರತದ ಪ್ರತಿಯೊಬ್ಬರಿಗೂ ಬ್ಯಾಂಕ್ ಅಕೌಂಟ್ ತೆಗೆಯುವುದರಿಂದ ಅನೇಕ ಯೋಜನೆಗಳು ಬಡವರಿಗೆ ದೊರೆಯುತ್ತಿವೆ. ಈ ಹಿಂದೆ ಕೇಂದ್ರದಿಂದ ಬಿಡುಗಡೆಯಾದ 1000 ಹಣದಲ್ಲಿ ಫಲಾನುಭವಿಗೆ ಸೋರಿಕೆಯಾಗಿ 15 ರೂಪಾಯಿ ಸಿಗುತ್ತಿತ್ತು ಆದರೆ ಇಂದು ನೇರವಾಗಿ ಫಲಾನುಭವಿಗೆ ದೊರಕುತಿದೆ ಎಂದು ಹೇಳಿದರು.
ಮಹಿಳೆಯರಿಗೆ ನಾರಿ ಶಕ್ತಿ ಯೋಜನೆ ಅಡಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ 2028ರ ಡಿಲಿಮಿಟೇಶನ್ ಖಂಡಿತ ಮಾಡಿ ಮಹಿಳೆಯರಿಗೆ ಶೇ. 33 ವಿಧಾನಸಭೆ ಮತ್ತು ಲೋಕಸಭೆಯಲ್ಲಿ ವಿವಿಧ ಚುನಾವಣೆಗಳಲ್ಲಿ ಮೀಸಲು ನೀಡಲು ಸಂಕಲ್ಪ ತೊಟ್ಟಿದ್ದಾರೆ. ಪ್ರಧಾನಿ ಮೋದಿಯವರ ಅನೇಕ ಯೋಜನೆಗಳು ಬಡವರಿಗೆ ಇಂದು ದೊರಕುತ್ತಿವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಗೌಡ ವಿಭೂತಿಹಳ್ಳಿ, ನಿವೇದಿತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಂಡಪ್ಪಾ ದಾಸನ್, ಭೀಮನಗೌಡ ಕ್ಯಾತನಾಳ ಮಾತನಾಡಿದರು. ಗಂಜ ವರ್ತಕರ ಸಂಘದ ಅಧ್ಯಕ್ಷ ಸೋಮನಾಥ ಜೈನ್ ಅಧ್ಯಕ್ಷತೆ ವಹಿಸಿದರು. ವೀಕ್ಷಕರಾಗಿ ಹಣಮಂತ ರಾವ್ ಜೋಳದಡಗಿ ಆಗಮಿಸಿದರು. ರೈಸ್ ಮಿಲ್ ಅಧ್ಯಕ್ಷ ಬಸವರಾಜ್ ಸಜ್ಜನ್, ಇಂಜಿನಿಯರ್ ಹೇಮಂತ್ ಕುಮಾರ್, ಉಮಯ್ಯಸ್ವಾಮಿ ವಿಕಸಿತ ಭಾರತ ಸಂಚಾಲಕ ರಾಜುಗೌಡ ಊಕ್ಕಿನಾಳ್ ಪ್ರಾಸ್ತಾವಿಕ ಮಾತನಾಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಕುರಕುಂದಿ, ಬಿಜೆಪಿ ನಗರ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ವೆಂಕಟ್ ರೆಡ್ಡಿ ಅಬ್ಬೆ ತುಮಕೂರ್, ಡಾಕ್ಟರ್, ಇಂಜಿನಿಯರ್, ವ್ಯಾಪಾರಿಗಳು ಉದ್ಯಮಿಗಳು ಮುಂತಾದವರು ಭಾಗವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ವಿಲಾಸ್ ಪಾಟೀಲ, ಸುನಿತಾ ಚೌಹಾನ್, ಭೀಮ್ ಬಾಯಿ, ಕರೆಮ್ಮ ನಗರಸಭಾ ಸದಸ್ಯೆ ವಿಜಯಲಕ್ಷ್ಮಿ ನಾಯಕ್, ಸ್ವಾಮಿದೇವ್ ದಾಸನಕೇರಿ, ನಾಗರೆಡ್ಡಿ ಇಬ್ರಾಹಿಂಪೂರ್, ಚಂದ್ರಕಲಾ ಸ್ನೇಹ, ಮಾರುತಿ ಕಲಾಲ್, ನಾಗಪ್ಪ ಗಚ್ಚಿನಮನಿ, ಚಂದ್ರಶೇಖರ್ ಕಡೆಸೂರ್, ಮಲ್ಲು ಕೋಳಿವಾಡ, ಆನಂದ್ ಗಡ್ಡಿಮನಿ, ಮಲ್ಲಿಕಾರ್ಜುನ್ ಮುದ್ನಾಳ್, ಚನ್ನ ವೀರಯ್ಯ ಸ್ವಾಮಿ ಸೇರಿದಂತೆ ಇತರರು ಇದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ ನಿರೂಪಿಸಿದರು, ಮಲ್ಲಿಕಾರ್ಜುನ್ ಕಟ್ಟಿಮನಿ ಸ್ವಾಗತಿಸಿದರು, ಪರಶುರಾಮ್ ಕುರುಕುಂದಿ ವಂದಿಸಿದರು, ವೆಂಕಟರೆಡ್ಡಿ ಅಬ್ಬೆ ತುಮಕೂರು ಪ್ರಮಾಣ ವಚನ ಬೋಧಿಸಿದರು.

