ಯಡ್ರಾಮಿ ಪತ್ರಕರ್ತ ಮೇಲೆ ಹಲ್ಲೆಗೈದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಸೀಲ್ದಾರ್ ಗೆ ಮನವಿ
ನಾಗಾವಿ ಎಕ್ಸಪ್ರೆಸ್
ಜೇವರ್ಗಿ: ಯಡ್ರಾಮಿ ತಾಲೂಕಿನ ಕನ್ನಡಪ್ರಭ ದಿನ ಪತ್ರಿಕೆ ವರದಿಗಾರ ಪ್ರಶಾಂತ ಚವ್ಹಾಣ ಮೇಲೆ ಹಲ್ಲೆ ಮಾಡಿದ ಕೀಡಿಗೇಡಿಗಳನ್ನು ಕೊಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ನೇತೃತ್ವದಲ್ಲಿ ಪತ್ರಕರ್ತರು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ರಮೇಶ ಆಲೂರ ಮಾತನಾಡಿ, ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಕೀಡಿಗೇಡಿಗಳನ್ನು ಈ ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬುಧವಾರ ತಡರಾತ್ರಿ ಯಡ್ರಾಮಿ ವರದಿಗಾರ ಪ್ರಶಾಂತ ಚವ್ಹಾಣ ಅವರ ಮೇಲೆ ಹಲ್ಲೆ ಮಾಡಿದ ಕೀಡಿಗೇಡಿಗಳನ್ನು 24 ಗಂಟೆ ಒಳಗಾಗಿ ಬಂಧಿಸಿ ಶಿಕ್ಷೆ ನೀಡದೆ ಹೋದರೆ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಉಗ್ರವಾದ ಹೋರಾಟ ನಡೆಸಲಾಗುತ್ತದೆ ಮತ್ತು ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಪತ್ರಕರ್ತರಿಗೆ ಯಾವುದೇ ತೊಂದರೆ ಆಗದಂತೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜೇವರ್ಗಿ ತಾಲೂಕು ಅಧ್ಯಕ್ಷ ರಮೇಶ್ ಆಲೂರು, ಗೌರವಾಧ್ಯಕ್ಷ ಪ್ರಕಾಶ ಆಲಬಾಳ, ರವೀಂದ್ರ ವಕೀಲ, ವಿಜಯಕುಮಾರ್ ಕಲ್ಲಾ, ಶರಣಪ್ಪ ಎನ್. ನೆರಡಗಿ, ರಾಜು ಮುದ್ದಡಗಿ, ಗೌಸ್ ಇನಾಮ್ಹಾರ್, ಶರಣಪ್ಪ ಬಡಿಗೇರ್, ನಾಗರಾಜ ಶಹಾಬಾದಕರ್, ಸಿದ್ದು ಕಾಮನಕೇರಿ ಉಪಸ್ಥಿತರಿದ್ದರು.

