ಅಹಿಂದ ರಾಜ್ಯ ಸಂಚಾಲಕರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿಗಳಾಗಿ ಗುಂಡು ಐನಾಪೂರ, ತಿಪ್ಪಣ್ಣ ಒಡೆಯರ್ ನೇಮಕ 

ನಾಗಾವಿ ಎಕ್ಸಪ್ರೆಸ್

ಕಲಬುರಗಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಂಘಟನೆ ಅಹಿಂದ ಚಳುವಳಿಯ ರಾಜ್ಯ ಸಂಚಾಲಕರಾಗಿ ಮತ್ತು ಕಲಬುರಗಿ ಜಿಲ್ಲೆಯ ಉಸ್ತುವಾರಿಗಳಾಗಿ ಗುಂಡು ಐನಾಪೂರ ಮತ್ತು ತಿಪ್ಪಣ್ಣ ಒಡೆಯರ್ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಸಂಚಾಲಕ ಆರ್ ಸುರೇಂದ್ರ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ನಾಯಕರನ್ನು ಸಂಘಟಿಸಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮಾಜಗಳ ಜನರಿಗೆ ಧ್ವನಿಯಾಗಿ ಕೆಲಸ ಮಾಡಲು ಕೊಟ್ಟ ಈ ಜವಾಬ್ಧಾರಿಯನ್ನು ಹಿರಿಯರ ಮಾರ್ಗದರ್ಶನದಲ್ಲಿ ಚಾಚು ತಪ್ಪದೆ ನಿರ್ವಹಿಸಿಕೊಂಡು ಹೋಗುವುದಾಗಿ ಅವರು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಅಹಿಂದ ಸಂಘಟನೆಗೆ ಎಲ್ಲಾ ಹಿಂದುಳಿದ ಸಮಾಜಗಳ ಮುಖಂಡರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!