ವಾಡಿ ಪಟ್ಟಣದಲ್ಲಿ ದಿ.ವಾಲ್ಮೀಕಿ ನಾಯಕ 4 ನೇ ಪುಣ್ಯಸ್ಮರಣೆ, ಗೌರವ ನಮನ ಸಲ್ಲಿಸಿದ ಮುಖಂಡರು
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದಲ್ಲಿ ವಾಲ್ಮೀಕಿ ನಾಯಕ ಕುಟುಂಬ ಹಾಗೂ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರ 4 ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ಆಗಮಿಸಿದ್ದ ಮುಖಂಡರು ಅವರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ನಮನಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿಠಲ್ ನಾಯಕ, ಭಗವತ್ ಸುಳೆ, ರಾಜು ಮುಕ್ಕಣ್ಣ, ವೀರಣ್ಣ ಯಾರಿ, ತಮ್ಮಣ ಡಿಗ್ಗಿ, ಭೀಮಶಾ ಜೀರಳ್ಳಿ, ಶರಣು ನಾಟೀಕಾರ, ಆನಂದ ಡವಳೆ ಸೇರಿದಂತೆ ಇತರರು ಇದ್ದರು.

