ಕುರಿಗಾಯಿಗಳ ಹಿತರಕ್ಷಣಾ ಕಾಯಿದೆ ಜಾರಿಗೊಳಿಸಿ, ಕುರಿಗಾಯಿ ಕೊಲೆ ಆರೋಪಿಗಳ ಬಂಧನಕ್ಕೆ ಕುರುಬ ಸಮಾಜ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಕುರಿ ಕಳವು ಮಾಡಲು ಬಂದ ಮೂವರು ಕಳ್ಳರನ್ನು ಹಿಡಿಯಲು ಹೋದಾಗ ಕುರಿಗಾಯಿಯನ್ನು ಕೊಲೆ ಮಾಡಿದ ದುಷ್ಟರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಿಬೇಕು ಹಾಗೂ ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬುಧವಾರ ಕುರಿಗಾರರ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸುಘ ತಾಲೂಕು ಘಟಕದ ಮುಖಂಡರು ಕಾಳಗಿ ಗ್ರೇಡ್-2 ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರಮುಖರು, ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಯಿ ಶರಣಪ್ಪ ಜಮನಕಟ್ಟಿ ಅವರನ್ನು ಮೂವರು ಕಳ್ಳರು ಕೂಡಿಕೊಂಡು ಕೊಲೆ ಮಾಡಿದ್ದು ಅಮಾನವೀಯ ಕೃತ್ಯವಾಗಿದೆ. ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಸರಕಾರ ಕುರಿಗಾರರ ಹಿತರಕ್ಷಣಾ ಕಾಯಿದೆ ತಕ್ಷಣ ಜಾರಿಗೆ ತರಬೇಕು, ಕುರಿಗಾಯಿಗಳ ರಕ್ಷಣೆ ಮತ್ತು ಭದ್ರತೆಗಾಗಿ ಸರಕಾರ ಕುರಿಗಾಯಿಗಳ ಹಿತರಕ್ಷಣಾ ಕಾಯಿದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮೃತರ ಕುಟುಂಬಕ್ಕೆ ಸರಕಾರ 50 ಲಕ್ಷ ರೂ.ಆರ್ಥಿಕ ನೆರವು ನೀಡಬೇಕು, ರಾಜ್ಯದಲ್ಲಿ ಕುರಿಗಾರರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಸರಕಾರ ಕುರಿಗಾರರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು, ಕುರಿಗಾಯಿಗಳಿಗೆ ಬಂದೂಕು ಕೊಡುವ ವ್ಯವಸ್ಥೆ ಜಾರಿ ಮಾಡಬೇಕು, ಕುರಿಗಾರರಿಗೆ ಪ್ರತ್ಯೇಕ ಕಾನೂನು ರೂಪಿಸಬೇಕು, ಎಂಬಿತ್ಯಾಧಿ ಬೇಡಿಕೆಗಳನ್ನು ಈಡೇರಿಸುಮತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಕಾಳಗಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪಾ ಅಣಕಲ್, ಹಿರಿಯ ಮುಖಂಡ ರೇವಣಸಿದ್ದಪ್ಪ ಸಾತನೂರ, ಕಾರ್ಯಾಧ್ಯಕ್ಷ ಹಣಮಂತ ಬೆಂಕಿ, ಪ್ರಧಾನ ಕಾರ್ಯದರ್ಶಿ ಸಿದ್ದು ವಚ್ಚಾ, ಮಲ್ಲಿಕಾರ್ಜುನ ಕೊಡದೂರ, ಹಣಮಂತ ಕಂದಗೋಳ, ಶರಣಬಸ್ಸಪ್ಪಾ ಪಾಟೀಲ್, ಅಶೋಕ ಹೂಗೊಂಡ, ನಿಂಗಣ್ಣಾ ಜಿವಣಗಿ, ಪ್ರವೀಣ ಪೂಜಾರಿ, ರೇವಣಸಿದ್ದ ಪೂಜಾರಿ ಸೂಗುರು(ಕೆ), ಬಾಬು ಗೋಟೂರ, ಬನವರಾಜ ರಾಜಾಪೂರ, ತಿಪ್ಪಣ್ಣಾ ಪೂಜಾರಿ ಅರಣಕಲ್ ಇತರರು ಇದ್ದರು.

