Oplus_131072

ಜೂ.24 ರಂದು ವಾರಸುದಾರರು ಇಲ್ಲದ 19 ದ್ವಿಚಕ್ರ ವಾಹನಗಳ ಬಹಿರಂಗ ಹರಾಜು: ಪಿಎಸ್ಐ ಶ್ರೀಶೈಲ್ ಅಂಬಾಟಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪೊಲೀಸ್ ಠಾಣೆಯ ಆವರಣದಲ್ಲಿರುವ ಯಾವುದೇ ಪ್ರಕರಣಗಳಲ್ಲಿ ಇಲ್ಲದ ಮತ್ತು ವಾರಸುದಾರರು ಇಲ್ಲದ ವಿವಿಧ ಕಂಪನಿಯ 19 ದ್ವಿಚಕ್ರ ವಾಹನಗಳ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ ಎಂದು ಪಿಎಸ್ಐ ಶ್ರೀಶೈಲ್ ಅಂಬಾಟಿ ತಿಳಿಸಿದ್ದಾರೆ.

ಚಿತ್ತಾಪುರ ಪೊಲೀಸ್ ಠಾಣೆ ಆವರಣದಲ್ಲಿ ಯಾವುದೇ ಪ್ರಕರಣಗಳಲ್ಲಿ ಇಲ್ಲದ ಮತ್ತು ವಾರಸುದಾರರು ಇಲ್ಲದ ವಿವಿಧ ಕಂಪನಿಯ ವಾಹನಗಳು ಇದ್ದು, ಸದರಿ ವಾಹನಗಳು ಯತಾಸ್ಥಿತಿಯಲ್ಲಿದ್ದು ಠಾಣೆಯಲ್ಲಿಯೇ ಹಾಳಾಗಿ ತುಕ್ಕು ಹಿಡಿದುಕೊಂಡಿದ್ದು, ಹೀಗೆ ಒಟ್ಟು 19 ದ್ವಿಚಕ್ರ ವಾಹನಗಳು ಇದ್ದ ಪರಿಸ್ಥಿತಿಯಲ್ಲಿ ಆರ.ಟಿ.ಓ ಕಲಬುರಗಿರವರು ಪರಿಶೀಲಿಸಿ ನಿಗಧಿಪಡಿಸಿದ ವಾಹನಗಳು ಗುಜರಿ ಲೆಕ್ಕದಲ್ಲಿ ಸಾರ್ವಜನಿಕವಾಗಿ ಬಹಿರಂಗ ಹರಾಜು ಮಾಡಿ ಎಲ್ಲಾ ವಾಹನಗಳು ವಿಲೇವಾರಿ ಸಲುವಾಗಿ ಜೆ.ಎಮ್.ಎಫ್.ಸಿ ನ್ಯಾಯಾಲಯ ಚಿತ್ತಾಪುರ ರವರು ಅನುಮತಿ ನೀಡಿದ್ದಾರೆ.

ಕಾರಣ ಇದೇ ಜೂನ್ 24 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ತಾಪುರ ಪೊಲೀಸ್ ಠಾಣೆ ಆವರಣದಲ್ಲಿರುವ 19 ದ್ವಿಚಕ್ರ ವಾಹನಗಳನ್ನು ಆರ.ಟಿ.ಓ ರವರು ನಿಗಧಿಪಡಿಸಿದ ಮೊತ್ತಕ್ಕೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡುತ್ತಿದ್ದು, ಸದರಿ ವಾಹನಗಳನ್ನು ಖರೀದಿ ಮಾಡಲು ಇಚ್ಚೆಯುಳ್ಳ ಸಾರ್ವಜನಿಕರು ಹರಾಜು ಪ್ರಕ್ರಿಯೆ ದಿನಾಂಕದಂದು  ಪೊಲೀಸ್ ಠಾಣೆಗೆ ಬಂದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಈ ಮೂಲಕ ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!