ಎಪಿಎಂಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲಬುರಗಿಯಿಂದ ವಿಜಯಪುರಕ್ಕೆ ಪಾದಯಾತ್ರೆ ಆರಂಭ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಎಪಿಎಂಸಿ ಅನಧಿಕೃತ ಅಂಗಡಿಗಳ ಬೆಂಬಲಕ್ಕೆ ನಿಂತ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ, ಕೃಷಿ ಮಾರುಕಟ್ಟೆ ಸಚಿವರ ರಾಜೀನಾಮೆಗೆ, ಕೃಷಿ ಮಾರಾಟ ಮಹಾಮಂಡಳಿ ನಿರ್ದೇಶಕರ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗಳ ಅಮಾನತ್ತಿಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಉಳಿಸಿ ಬೆಳೆಸಿ ಹೋರಾಟ ಸಮಿತಿ ಸಂಘಟನೆಗಳ ಒಕ್ಕೂಟ ಕಲಬುರಗಿ ಇವರ ನೇತೃತ್ವದಲ್ಲಿ ಕಲಬುರಗಿ ಯಿಂದ ವಿಜಯಪೂರದ ವರೆಗೆ ಪಾದಯಾತ್ರೆ ಸೋಮವಾರ ಆರಂಭವಾಯಿತು.
ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ಮಾತನಾಡಿ, ಎಪಿಎಂಸಿಯಲ್ಲಿರುವಂತಹ ರಾಜಸ್ಥಾನಿ ಸೇರಿ ಅನದಿಕೃತ ಅಂಗಡಿಗಳನ್ನು ತಕ್ಷಣದಿಂದಲೆ ತೆರವು ಕಾರ್ಯ ಪ್ರಾರಂಬಿಸಬೇಕು ಎಂದು ಆಗ್ರಹಿಸಿದರು.
ರಾಜಸ್ಥಾನಿಗಳ ಜೋತೆಯಲ್ಲಿ ಹೋಂದಾಣಿಕೆ ಹೋಂದಿರುವಂತ ಭ್ರಷ್ಟ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ಮಾಡಬೇಕು, ಕೃಷಿಗೂ ಹೆಸರಿಗೂ ಸಂಬಂದವಿರದ ನೆಹರು ಗಂಜ್ ಹೆಸರು ಬದಲಿಸಿ ಶ್ರೀ ಶರಣಬಸವೇಶ್ವರ ಗಂಜ್ ಎಂದು ಹೆಸರಿಟ್ಟು ಸದ್ಯಕ್ಕೆ ಇರುವ ಎಪಿಎಂಸಿ ಅಲ್ಲೆ ಮುಂದುವರೆಸಬೇಕು, ಬೇರೆ ಕಡೆಗೆ ಸ್ಥಳಾಂತರಿಸಬಾರದು ಸ್ಥಳಾಂತರಿಸಿದರೆ ಈಗ ಅನದಿಕೃತ ಅಂಗಡಿಗಳಿಗೆ ಬಾಡಿಗೆ ಕೋಟ್ಟಿಕುವವರು ಆಗ ರಾಜಸ್ಥಾನಿಗಳಿಗೆ ಜಾಗ ಮಾರಾಟ ಮಾಡಿ ಮತ್ತೇ ಹೊಸ ಮಾರುಕಟ್ಟೆಯಲ್ಲಿ ಅವರೆ ನಿವೇಶನ ಪಡೆದು ಮತ್ತೆ ರಾಜಸ್ಥಾನಿ ವ್ಯಾಪಾರಿಗಳಿಗೆ ಬಾಡಿಗೆ ನೀಡಿ ಅದೆ ರಾಗ ಅದೆ ಹಾಡು ಹಾಡುತ್ತಾರೆ ಎಂದು ಹೇಳಿದರು.
ಭ್ರಷ್ಟ ಶ್ರಿಮಂತ ಜನಗಳಿಗೆ ಅನೂಕುಲ ಆಗುತ್ತದೆಯೇ ವಿನಹ ರೈತರಿಗೆ ಯಾವ ಅನುಕೂಲ ಆಗಲ್ಲ, ತೊಂದರೆ ತಪ್ಪಲ್ಲಾ ಹಾಗಾಗಿ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ್ ನರಿಬೋಳ, ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ, ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ್ ಸ್ವಾಧಿ, ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್ ಸರವಾಡ್, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ರಾಂಪುರ್, ಭಾರತೀಯ ಯುವ ಸೇನೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ್ ಚಿಂಚನಸೂರ್, ರಾಮ ಸೇನೆ ಜಿಲ್ಲಾಧ್ಯಕ್ಷ ಮಹೇಶ್ ಕೆಂಭಾವಿ, ಶ್ರೀಕಾಂತ್ ರೆಡ್ಡಿ, ಸುನಿಲ್ ಸಿರ್ಕೆ, ದಶರಥ್ ಇಂಗೋಳೇ, ಚಿದಾನಂದ ಮಠಪತಿ ಸೇರಿದಂತೆ ಇತರರು ಇದ್ದರು.

