ಕಲಬುರಗಿ: ಮಂದಕೃಷ್ಣ ಮಾದಿಗ ರವರ 60ನೇ ಜನ್ಮದಿನದ ಪ್ರಯುಕ್ತ ಅನ್ನ ಸಂತರ್ಪಣೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ನಲ್ಲಿರುವ ಡಾ. ಬಾಬು ಜಗಜೀವನರಾಮ್ ರವರ ಪುತ್ಥಳಿ ಎದುರು ಮಾದಿಗ ದಂಡೋರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರ 60ನೇ ಜನ್ಮದಿನದ ಪ್ರಯುಕ್ತ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಸುಂದರ ಡಿ. ಸಾಗರ ಅವರ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಲಿಂಗರಾಜ ತಾರಪೈಲ್, ರಾಜು ಹದನೂರ, ಹಣಮಂತ ಮೇಲಿನಕೇರಿ, ರಾಜು ವಾಡೇಕಾರ, ಗೋರಖನಾಥ ಶಾಖಾಪೂರ, ದಶರಥ ಕಲಗುರ್ತಿ, ರಂಜೀತ ಮೂಲಿಮನಿ, ಗುರು ಭಂಡಾರಿ, ಚಂದ್ರಕಾಂತ ನಾಟೀಕಾರ, ಶರಣಪ್ಪ ದಂಡೋತಿ, ನಾಗೇಂದ್ರ ದಂಡೋತಿ, ಕಮಲಾಪೂರ ತಾಲೂಕು ಅಧ್ಯಕ್ಷ ಚನ್ನವೀರ ದಸ್ತಾಪೂರ, ಕಿರಣ ರಾಜಾಪೂರ ಸೇರಿದಂತೆ ಮಾದಿಗ ಸಮಾಜದ ಮುಖಂಡರು ಇದ್ದರು.

