ಮುಕ್ತ ಮನಸು ಗೋಡೆ ಪತ್ರಿಕೆ ಬಿಡುಗಡೆ,  ವಿದ್ಯಾರ್ಥಿನಿಯರ ಪ್ರತಿಭೆ ಪ್ರೋತ್ಸಾಹಿಸಲು ಗೋಡೆ ಪತ್ರಿಕೆ ಸಹಕಾರಿ: ಸತ್ಯಂಪೇಟೆ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಎಲ್ಲ ವಿದ್ಯಾರ್ಥಿಗಳು ಕೇವಲ ಮೊಬೈಲ್ ವಶಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಲೇಜಿನ ಗೋಡೆ ಪತ್ರಿಕೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸಹಕಾರಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ನುಡಿದರು.

ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದವರು ಸಂಚಾಲಿತ “ಮುಕ್ತ ಮನಸು” ಗೋಡೆ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ವಿಭಾಗದವರು ಈ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಈ ತರಹದ ಪ್ರಯೋಗ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಈ ರೀತಿಯ ಪ್ರಯೋಗ ಮೊದಲು ಹಿಂದಿ ವಿಭಾಗದ ವತಿಯಿಂದ ಆರಂಭಿಸಲಾಯಿತು. ಅವರಿಂದ ಪ್ರೋತ್ಸಾಹ ಪಡೆದು ಕನ್ನಡ ವಿಭಾಗದವರು ಮುಕ್ತ ಮನಸು ಗೋಡೆ ಪತ್ರಿಕೆ ಆರಂಭಿಸಿರುವುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದ ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ಪ್ರೊ. ವೀಣಾ ಎಚ್, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ, ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ ಮಹೇಶ ಗಂವ್ಹಾರ, ಆಯಿಕ್ಯೂಎಸಿ ಸಂಯೋಜಕರಾದ ಡಾ. ಶಿವರಾಜ ಜಿ., ಡಾ. ಜ್ಯೋತಿಪ್ರಕಾಶ ದೇಶಮುಖ, ಡಾ. ಸವಿತಾ, ಶಿವಲೀಲಾ ಧೋತ್ರ. ಡಾ. ಮೋಹಸೀನಾ, ಸುಷ್ಮಾ ಕುಲಕರ್ಣಿ, ಡಾ. ರಾಜೇಶ, ಗೀತಾ ಪಾಟೀಲ, ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ಕನ್ನಡ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಕವಿತಾ ಅಶೋಕ ಸ್ವಾಗತಿಸಿದರು, ಬಸಮ್ಮ ಗೊಬ್ಬೂರ ನಿರೂಪಿಸಿದರು, ದಾನಮ್ಮ ಕೋರವಾರ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!