ಕಲ್ಯಾಣ ಕರ್ನಾಟಕ ಟೈಗರ್ಸ್ ಬ್ರಿಗೇಡ್ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷರಾಗಿ ಹಣಮಂತ ಬೆಂಕಿ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಲ್ಯಾಣ ಕರ್ನಾಟಕ ಟೈಗರ್ಸ್ ಬ್ರಿಗೇಡ್ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ಮುಂದಿನ ಆದೇಶದವರೆಗೂ ಹಣಮಂತ ಬೆಂಕಿ ಮುಗಟಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಸತೀಶಕುಮಾರ ಸೂಗೂರ, ಜಿಲ್ಲಾಧ್ಯಕ್ಷ ಸಿದ್ದಣ್ಣ ವಚ್ಚಾ ಅವರು ತಿಳಿಸಿದ್ದಾರೆ.
ಆದ್ದರಿಂದ ತಾವುಗಳು ಸಾಮಾಜಿಕ ಕಳಕಳಿಯ ಕಲ್ಯಾಣ ಕರ್ನಾಟಕ ಟೈಗರ್ಸ್ ಬ್ರಿಗೇಡ್ ನಿಯಮಗಳಿಗೆ ಹಾಗೂ ಸಂವಿಧಾನದ ಬದ್ಧರಾಗಿ ತಮಗೆ ವಹಿಸಿರುವ ಪದಾಧಿಕಾರದ ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ಸಂವಿಧಾನ ವಿರುದ್ಧ ಹಾಗೂ ಕೆ.ಕೆ, ಟೈಗರ್ಸ್ ಬ್ರಿಗೇಡ್ ಮೂಲ ಉದ್ದೇಶಗಳ ವಿರುದ್ಧವಾಗಿ ಕೆಲಸ ಮಾಡಿದರೆ ಕೆ.ಕೆ ಟೈಗರ್ಸ್ ಬ್ರಿಗೇಡ್ ಪದಾಧಿಕಾರಿ ಹುದ್ದೆ ಮತ್ತು ಸದಸ್ಯತ್ವ ರದ್ದಾಗುತ್ತದೆ ಎಂದು ನೇಮಕಾತಿ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

