Oplus_0

ಮುತ್ತಗಾ ಗ್ರಾಮಕ್ಕೆ ಶಾಸಕ ಬಸವರಾಜ ಮತ್ತಿಮುಡ್ ಭೇಟಿಶ್ರೇಷ್ಠ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಮಹಾನ್ ಮಾನವತಾವಾದಿ, ಸಮಾಜ ಸುಧಾರಕರು ಹಾಗೂ ವಚನ ಚಳವಳಿಯ ಶ್ರೇಷ್ಠ ಪ್ರೇರಕರಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೆಡು ಕೃತ್ಯವಾಗಿದೆ ಎಂದು ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ್ ಹೇಳಿದರು.

ಮುತ್ತಗಾ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಭಗ್ನಗೊಂಡ ಅಂಬಿಗರ ಚೌಡಯ್ಯ ಮೂರ್ತಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ನಾಡಿನ ಎಲ್ಲೆಡೆ ವಿವಿಧ ಮಹಾ ಪುರುಷರ ಪ್ರತಿಮೆಗಳಿವೆ ಅವರ ಚಿಂತನೆಗಳು ಜನಮನದಲ್ಲಿ ಅಳಿಸಲಾಗದ ಗುರುತು ಬಿಟ್ಟಿವೆ. ಎಲ್ಲರನ್ನೂ ನಾಡಿನ ಜನರು ಗೌರವಿಸುತ್ತಾರೆ. ಆದರೆ ಮುತ್ತಾ ಗ್ರಾಮದಲ್ಲಿ ನಮ್ಮ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯ ಕೈ ಮುರಿದು, ಮುಖದ ಮೇಲೆ ಸಗಣಿ ಎರಚಿದ ಕೃತ್ಯ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ ಎಂದರು.

ವಿವಿಧ ಸಮುದಾಯಗಳು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಇಂತಹ ಕೃತ್ಯದಿಂದ ಅವರ ಭಾವನೆಗಳಿಗೆ ನೇರ ಅವಮಾನವಾಗಿದೆ. ಇದು ನಮ್ಮ ಸಾಂಸ್ಕೃತಿಕ ಪರಂಪರೆ, ನಂಬಿಕೆ ಮತ್ತು ಸಹಬಾಳ್ವೆ ಮೌಲ್ಯಗಳ ಮೇಲಿನ ದಾಳಿ ಎಂದರೆ ತಪ್ಪಾಗಲಾರದು. ಈ ರೀತಿಯ ಹೇಯ ಕೃತ್ಯಗಳು ಸಮಾಜದಲ್ಲಿ ದ್ವೇಷ, ಅಸೂಯೆ ಮತ್ತು ವಿಭಜನೆಗೆ ಕಾರಣವಾಗುತ್ತವೆ. ನಿಜಶರಣ ಅಂಬಿಗರ ಚೌಡಯ್ಯರವರ ತತ್ವಗಳು, ಮಾನವೀಯತೆ ಮತ್ತು ನೈತಿಕತೆಯ ಸಂದೇಶಗಳು ಎಂದಿಗೂ ಅಜರಾಮರವಾಗಿವೆ. ಇಂತಹ ದುಷ್ಕೃತ್ಯಗಳಿಂದ ಅವರ ಚಿಂತನೆಗಳನ್ನು ಮಸುಕಾಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಮಾಜಿ ಸಚಿವ ಬಾಬುರಾವ್ ಚವ್ಹಾಣ, ರಾಜ್ಯ ಬಿಜೆಪಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಹಾಗೂ ಕೋಲಿ ಸಮಾಜದ ಮುಖಂಡ ಅವಣ್ಣ ಮ್ಯಾಕೇರಿ ಹಾಗೂ ಜಿಪಂ ಮಾಜಿ ಸದಸ್ಯೆ ಶೋಭಾ ಭಾಣಿ ಅವರು ಮಾತನಾಡಿ, ಈ ಕೃತ್ಯದಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅದೇ ಸ್ಥಳದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಭವ್ಯ ಪ್ರತಿಮೆಯನ್ನು ಮರು ಪ್ರತಿಷ್ಠಾಪನೆ ಮಾಡಬೇಕು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು, ಮಹಾತ್ಮರ ಪ್ರತಿಮೆಗಳನ್ನು ಅವಮಾನಿಸುವವರ ವಿರುದ್ಧ ಸಮಾಜವು ಒಗ್ಗಟ್ಟಾಗಿ ನಿಂತು ಖಂಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ  ಅಶೋಕ ಬಗಲಿ ಚಿತ್ತಾಪುರ ಮಂಡಲ ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮಂಡಲದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಇಟಗಿ ಮಹೇಂದ್ರ  ಕೋರಿ ಮುತ್ತಗಾ, ಚಂದ್ರು ಉಟಗೂರ, ಯಲ್ಲಾಲಿಂಗ ನಾಗೂರ್, ಚಂದ್ರಕಾಂತ್ ನಾಗೂರ್, ಸಾಹೇಬಗೌಡ ಪಾಟೀಲ, ಕೋಲಿ ಸಮಾಜ ಅಧ್ಯಕ್ಷ ಶಿವರಾಜ ನಾಟೀಕಾರ ಮುತ್ತಗಾ, ಬಸವರಾಜ ಜೀರಕಲ್, ವಿಜಯಕುಮಾರ ನಾಟೀಕಾರ ಸೇರಿದಂತೆ ಗ್ರಾಮದ ಹಿರಿಯರು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!