ಯಾದಗಿರಿ ಕ್ರಿಸ್ ಮಸ್ ಹಬ್ಬದ ಆಗಮನಕ್ಕೆ ಸಂಭ್ರಮದ ಸ್ವಾಗತ : ಭವ್ಯ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಡಿಸೆಂಬರ್ 25 ರಂದು ಅತ್ಯಂತ ಸಡಗರದಿಂದ ಆಚರಿಸುವ ಕ್ರಿಸ್ ಮಸ್ ಹಬ್ಬದ ಅಂಗವಾಗಿ ಅದರ ಆಗಮನದ ಮೆರವಣಿಯನ್ನು ನಗರದಲ್ಲಿ ಭಾನುವಾರ ಅಪಾರ ಜನರ ಜಯಘೋಷದ ನಡುವೆ ಸಂಭ್ರಮದಿಂದ ನಡೆಯಿತು.
ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಕ್ರಿಸ್‌ಮಸ್ ಆಗಮನದ ಮರೆವಣಿಗೆಗೆ ಕೈಸ್ತ ಸಮುದಾಯದವರು ತಾತಾ ಸಿಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ ಸಹಯೋಗದೊಂದಿಗೆ ಅದ್ದೂರಿ ಪಾದಯಾತ್ರೆಯ ಮೂಲಕ ಮೆರವಣಿಗೆ ಆರಂಭಿಸಿದರು.
ಮೆಥೋಡಿಸ್ಟ್ ಜಿಲ್ಲಾ ಮೇಲ್ವಿಚಾರಕ ರೆ. ಎಸ್. ನಂದಕುಮಾರ, ಸಹಾಯಕ ಸಭಾ ಪಾಲಕ ರೆ. ಜಾನವೆಸ್ಲಿ ಹಾಗೂ ತಾತಾ ಸಿಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ ನ ಪಾಸ್ಟರ್ ರೆ. ಅರುಣಕುಮಾರ ಅವರ ನೇತೃತ್ವದಲ್ಲಿ ಶಾಸ್ತ್ರೀ ವೃತ್ತ, ಹೊಸ ಬಸ್ ನಿಲ್ದಾಣ, ಹೊಸಳ್ಳಿ ಕ್ರಾಸ್ ಮೂಲಕ ತಾತಾ ಸಿಮೆಂಡಸ್ ಚರ್ಚ್ ಗೆ ಆಗಮಿಸಿತು.
ಈ ಸಂದರ್ಭದಲ್ಲಿ ವಿಜಯ ರತ್ನ, ಉದಯಕುಮಾರ ದೊಡ್ಮಮನಿ, ಶ್ಯಾಮಸನ್ ಮಾಳಿಕೇರಿ, ಸುರಪುರ್ ಚರ್ಚ ನ ಜಿಲ್ಲಾ ಮೇಲ್ವಿಚಾರಕ ರೆ. ಆನಂದ, ದೇವ ಪುತ್ರ ಮಾಳಿಕೇರಿ, ಸುಭಾಶ ಕನ್ನಡ, ಆನಂದ ಡಿಕೆ. ಸುನಾಥ ರೆಡ್ಡಿ, ಸೇರಿದಂತೆ ಇತರರಿದ್ದರು.
