Oplus_0

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಲಬುರಗಿ ಜಿಲ್ಲಾ ಶಾಖೆಯ ವಾರ್ಷಿಕ ಮಹಾಸಭೆ | ರಾಜ್ಯ ಹಾಗೂ ಜಿಲ್ಲಾ ಸಂಘದ ಕಾರ್ಯಚಟುವಟಿಕೆಗಳ ಮಾಹಿತಿ ಪುಸ್ತಕ ಬಿಡುಗಡೆ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಲಬುರಗಿ ಜಿಲ್ಲಾ ಶಾಖೆಯ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿತು.

ಸಭೆಯ ವಿಷಯ ಸೂಚಿಯಂತೆ 1 ಎಪ್ರಿಲ್ 2024 ರಿಂದ 31 ಮಾರ್ಚ್ 2025 ರವರಿಗೆ ಸಂಘದ ಜಮಾ ಖರ್ಚು ವೆಚ್ಚದ ಮಾಹಿತಿ ಸಭೆಯ ಗಮನಕ್ಕೆ ತರಲಾಯಿತು, ಜಮಾ -ಖರ್ಚು ವೆಚ್ಚಕ್ಕೆ ಸಭೆಯ ಅನುಮೋದನೆ ಪಡೆಯಲಾಯಿತು ಮತ್ತು ಸಂಘದ ಅಡಿಟ್ ವರದಿ ರಾಜ್ಯ ಸಂಘದ ಪ್ರಮುಖ ಸಾಧನೆಗಳು ಹಾಗೂ ಜಿಲ್ಲಾ ಸಂಘದ ಕಾರ್ಯಚಟುವಟಿಕೆಗಳು ಮಾಹಿತಿ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಮುಂದಿನ ದಿನಗಳಲ್ಲಿ ನೌಕರರಿಗೆ ಸಂಬಂಧಿಸಿದಂತೆ ಆರೋಗ್ಯ ಸಂಜೀವಿನಿ ಬಗ್ಗೆ HRMS-2 ಬಗ್ಗೆ ಕಾರ್ಯಗಾರ ಜಿಲ್ಲಾ ಹಂತದಲ್ಲಿ ಹಮ್ಮಿಕೊಳ್ಳಲಾಗುವದು, ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ವಾರ್ಷಿಕ ಕ್ರೀಡಾಕೂಟ ಆಯೋಜನೆ ಕುರಿತು ಚರ್ಚೆ ಮಾಡಲಾಯಿತು.

ಸಭೆಯಲ್ಲಿ ಗ್ರಂಥಾಲಯ ಇಲಾಖೆಯಲ್ಲಿ ತೆರವಾದ ನಿರ್ದೇಶಕ ಸ್ಥಾನಕ್ಕೆ ಮಲ್ಲಿನಾಥ ದೊಡಮನಿ ರವರಿಗೆ ನೇಮಕ ಮಾಡಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು ಮತ್ತು ಪತ್ರಕರ್ತ ಸಂಘದ ಪದಾಧಿಕಾರಿಗಳಾದ ಭೀಮಾಶಂಕರ, ರಾಜು ಉದನೂರ ಮತ್ತು ಪ್ರಶಸ್ತಿ ಭಾಜನರಾದ ವಿಜಯಕುಮಾರ್ ತೇಗಲತಿಪ್ಪಿ, ಸವಿತಾ ನಾಶಿ ಸಂಘದ ಪದಾಧಿಕಾರಿಗಳಾದ ಮಹೇಶ್ ಹೂಗಾರ, ಶಶಿಕಾಂತ ಹೋಳ್ಕರ್ ರವರಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸುರೇಶ ಎಲ್ ಶರ್ಮಾ ಖಜಾಂಚಿ ಶ್ರೀಮಂತ ಪಟ್ಟೇದಾರ, ರಾಜ್ಯ ಪರಿಷತ್ ಸದಸ್ಯ ಧರ್ಮರಾಯ ಜವಳಿ ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ, ಹಿರಿಯ ಉಪಾಧ್ಯಕ್ಷ ಎಂ.ಬಿ ಪಾಟೀಲ, ಸುರೇಶ ವಗ್ಗೆ, ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ, ವಿಭಾಗೀಯ ಉಪಾಧ್ಯಕ್ಷ ನೀಜಲಿಂಗಪ್ಪ ಕೊರಳ್ಳಿ, ನಿಜಲಿಂಗಪ್ಪ ಮಾನ್ವಿ ರಾಜ್ಯ ಪದಾಧಿಕಾರಿಗಳಾದ ಸಂತೋಷ ಸಲಗರ, ಗುರುಲಿಂಗಪ್ಪ ಪಾಟೀಲ, ಸಿದ್ದಲ್ಲಿಂಗಯ್ಯ ಸ್ವಾಮಿ, ಧಾನಪ್ಪ ಗೌಡ, ತಾಲೂಕು ಅಧ್ಯಕ್ಷರಾದ ಅನೀಲ ಗುತ್ತೇದಾರ, ಸಂಜೀವ ಬಗಲಿ, ಶಿವಕುಮಾರ ಢಂಬಳ, ಶಿವಪುತ್ರ ಕರಣಿಕ, ತಾಲೂಕು, ಜಿಲ್ಲೆಯ ಚುನಾಯಿತ /ನಾಮನಿರ್ದೇಶಿತ ಪ್ರತಿನಿಧಿಗಳು ವಿವಿಧ ಇಲಾಖೆಯ ನೌಕರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಚಂದ್ರಕಾಂತ ಏರಿ ಸ್ವಾಗತಿಸಿದರು, ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹೇಶ್ ಹೂಗಾರ ನಿರೂಪಿಸಿದರು, ಧರ್ಮರಾಯ ಜವಳಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!