ಕಪನೂರ ಚುನಾವಣಾ ಗುರುತಿನ ಚೀಟಿಗಳ ಕ್ಷೇತ್ರ ಬದಲಾವಣೆ ಮಾಡುವಂತೆ ಕನ್ನಡ ಭೂಮಿ ಜಾಗೃತಿ ಸಮಿತಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಪನೂರ ಗ್ರಾಮದ ಸಿದ್ದಾರೂಢ ಕಾಲೋನಿ ವಾರ್ಡ ನಂ:2 ಚುನಾವಣೆಯ ಗುರುತಿನ ಚೀಟಿಗಳ ಕ್ಷೇತ್ರ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಭೂಮಿ ಜಾಗೃತಿ ಸಮಿತಿ ಉತ್ತರ ಕರ್ನಾಟಕ ವಕ್ತಾರ ಆನಂದ ತೆಗನೂರ ಮಂಗಳವಾರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಿದ್ದಾರೂಢ ಕಾಲೋನಿ ಪ್ರದೇಶದಲ್ಲಿ ವಾಸವಾಗಿರುವ ಸಾರ್ವಜನಿಕರು ಅತ್ತ ದರಿ ಇತ್ತ ಪುಲಿ ಎಂಬಂತೆ ವಾಸಮಾಡುತ್ತಿದ್ದು, ಅವರ ಆಸ್ತಿಗೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳು ಈಗ ಸದ್ಯ ತಾಜಸುಲ್ತಾನಪೂರ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಟ್ಟಿರುತ್ತೇವೆ. ಆದರೆ ಚುನಾವಣೆ ಗುರುತಿನ ಚೀಟಿಗಳು ಬದಲಾವಣೆ ಆಗಿರುವುದಿಲ್ಲ, ಹೀಗಾಗಿ ಸದರಿ ಪ್ರದೇಶಲ್ಲಿ ವಾಸ ಮಾಡುತ್ತಿರುವ ಎಲ್ಲಾ ನಾಗರೀಕರ ಚುನಾವಣೆ ಗುರುತಿನ ಚೀಟಿಯ ಕ್ಷೇತ್ರ ಕಲಬುರಿಗಿ ಉತ್ತರ ದಿಂದ ಕಲಬುರಗಿ ದಕ್ಷಿಣ ಕ್ಷೇತ್ರ ವ್ಯಾಪ್ತಿಗೆ ಬದಲಾವಣೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಈ ಕಾರ್ಯ ಅತೀ ಶೀಘ್ರದಲ್ಲಿ ಮಾಡದಿದ್ದರೆ ನಮ್ಮ ಸಂಘಟನೆ ವತಿಯಿಂದ ಸಮಸ್ತ ಬಡಾವಣೆಯ ನಾಗರಿಕರೊಂದಿಗೆ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಉಗ್ರ ರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ, ಇದಕ್ಕೆ ಅವಕಾಶ ನೀಡದೆ ಕೂಡಲೇ ಸದರಿ ಚುನಾವಣಾ ಗುರುತಿನ ಚೀಟಿಗಳ ಕ್ಷೇತ್ರ ಬದಲಾವಣೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಶರಣಬಸಪ್ಪಾ ಖಂಡು, ಬಶೀರಸಾಬ ಟಪ್ಪಾ, ಜಗನ್ನಾಥ ಜಮಾದಾರ, ಶ್ರೀಕಾಂತ ತೊಂಡಿ, ಶರಣು ಮೇತ್ರೆ, ಆಸೀಫ್ ಮಿಯಾ, ಸಂತೋಷ ಗುತ್ತೇದಾರ, ಬಂಗಾರಪ್ಪ ಗುತ್ತೇದಾರ, ಗಫರ ಶಹಾ, ಸಂಜು ಗುತ್ತೇದಾರ ಸೇರಿದಂತೆ ಪದಾಧಿಕಾರಿಗಳು, ಬಡಾವಣೆಯ ನಾಗರೀಕರು ಹಾಜರಿದ್ದರು.

