ಚಿತ್ತಾಪುರ ಮುಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಭೀಮಣ್ಣ ಸಾಲಿ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: 2026-27 ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಚಿತ್ತಾಪುರ ವತಿಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಪ್ರಸ್ತುತ ಚಿತ್ತಾಪುರ ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಂಡಿದ್ದು ಬಿತ್ತನೆ ಬೀಜಕ್ಕೆ ಯಾವುದೇ ಕೊರತೆ ಇರುವದಿಲ್ಲ ಎಂದು ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಾಂಕೇತಿಕವಾಗಿ ರೈತರಿಗೆ ತೊಗರಿ, ಹೆಸರು ಮತ್ತು ಉದ್ದು ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಿ ಮಾತನಾಡಿದ ಅವರು, ರೈತರು ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಆತಂಕ ಪಡುವ ಅವಕಾಶ ಇರುವದಿಲ್ಲ, ಕೃಷಿ ಇಲಾಖೆಯಿಂದ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವದಿಲ್ಲ ಎಂದು ತಿಳಿಸಿದರು.
ನಂತರ ರೈತರು ಬಾಡಿಗೆ ಆಧರಿತ ಸೇವಾ ಕೇಂದ್ರದ ಕೃಷಿ ಉಪಕರಣಗಳ ಸದುಪಯೋಗ ಪಡೆದುಕೋಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ನಿರ್ದೇಶಕ ಶಿವಶರಣರೆಡ್ಡಿ, ಸಹಾಯಕ ಕೃಷಿ ನಿರ್ದೆಶಕ ಸಂಜೀವಕುಮಾರ ಮಾನಕರೆ, ಕೃಷಿ ಅಧಿಕಾರಿಗಳಾದ ರವಿಂದ್ರ ಕುಮಾರ, ಕರಣ ಕುಮಾರ, ಶ್ರೀನಿವಾಸ, ಬಸವರಾಜ ಬಂಗರಗಿ, ಲೆಕ್ಕ ಸಹಾಯಕ ರಾಮು ರಾಠೋಡ, ಸಚಿನ ಕುಮಾರ ಸೇರಿದಂತೆ ವಿವಿಧ ಗ್ರಾಮದ ರೈತರು ಉಪಸ್ಥಿತರಿದ್ದರು.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರೈತರು ಈ ಕೆಳಕಂಡ ಅಂಶಗಳನ್ನು ಅನುಸರಿಸಬೇಕಾಗಿ ಕೃಷಿ ಇಲಾಖೆಯ ವತಿಯಿಂದ ಎಲ್ಲಾ ರೈತರಲ್ಲಿ ಮನವಿ:
ಎಲ್ಲಾ ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸುವಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು, ರೈತರು ಬಿತ್ತನೆಗೆ ಮುಂಚಿತವಾಗಿ ಕಡ್ಡಾಯವಾಗಿ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು, ರೈತರು ಕಡ್ಡಾಯವಾಗಿ ಪರವಾನಿಗೆ ಹೊಂದಿದ ಅದಿಕೃತ ಮಾರಾಟಗಾರರಿಂದ ಮಾತ್ರ ಕೃಷಿ ಪರಿಕರಗಳನ್ನು ಖರೀದಿಸಬೇಕು, ಬಿತ್ತನೆ ಬೀಜಗಳ ಸಹಾಯಧನ ಮತ್ತು ರೈತರ ವಂತಿಕೆಗಳ ವಿವರ ಈ ಕೇಳಗಿನಂತೆ ಇರುತ್ತದೆ.
ತೊಗರಿ ಪೂರ್ಣ ದರ ಪ್ರತಿ ಕ್ವಿಂಟಾಲ್ 13200, ಸರ್ಕಾರದ ಸಹಾಯದನ ಪ್ರತಿ ಕ್ವಿಂಟಾಲ್ ಸಾಮಾನ್ಯ 2500, ಪಜಾ.ಪಪಂ 3750, ರೈತರ ವಂತಿಕೆ ಪ್ರತಿ ಕ್ವಿಂಟಾಲ್ ಸಾಮಾನ್ಯ 10700, ಪಜಾ.ಪಪಂ 9450, ಹೆಸರು ಪೂರ್ಣ ದರ ಪ್ರತಿ ಕ್ವಿಂಟಾಲ್ 12700, ಸರ್ಕಾರದ ಸಹಾಯದನ ಪ್ರತಿ ಕ್ವಿಂಟಾಲ್ ಸಾಮಾನ್ಯ 2500, ಪಜಾ.ಪಪಂ 3750, ರೈತರ ವಂತಿಕೆ ಪ್ರತಿ ಕ್ವಿಂಟಾಲ್ ಸಾಮಾನ್ಯ 10200, ಪಜಾ.ಪಪಂ 8950. ಉದ್ದು ಪೂರ್ಣ ದರ ಪ್ರತಿ ಕ್ವಿಂಟಾಲ್ 11750, ಸರ್ಕಾರದ ಸಹಾಯದನ ಪ್ರತಿ ಕ್ವಿಂಟಾಲ್ ಸಾಮಾನ್ಯ 2500, ಪಜಾ.ಪಪಂ 3750, ರೈತರ ವಂತಿಕೆ ಪ್ರತಿ ಕ್ವಿಂಟಾಲ್ ಸಾಮಾನ್ಯ 9250, ಪಜಾ.ಪಪಂ 8000.

