ಪ್ರಿಯಾಂಕ್ ಖರ್ಗೆ ಉಪ ಮುಖ್ಯಮಂತ್ರಿ ಹುದ್ದೆಗಾಗಿ ಭೋವಿ (ಕಾಶಿ) ವಡ್ಡರ ಸಮಾಜದಿಂದ ವಿಶೇಷ ಪೂಜೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಭೋವಿ (ಕಾಶಿ) ವಡ್ಡರ ಸಮಾಜ ವತಿಯಿಂದ ಪಟ್ಟಣದ ಕಾಶಿ ಏರಿಯಾದ ಗಣಪತಿ ಮಂದಿರದಲ್ಲಿ ಬುಧವಾರ ವಿಶೇಷ ಪೂಜೆ ನಡೆಯಿತು.
ಈ ವೇಳೆ ಸರಪಂಚ್ ವಿಠಲ್ ಕಟ್ಟಿಮನಿ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರು ಈಗಾಗಲೇ ಹಲವು ಖಾತೆಗಳ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಇವರನ್ನು ಡಿಸಿಎಂ ಮಾಡಬೇಕು ಎಂದು ಒತ್ತಾಯಿಸಿದರು.
ಕಾಶಿ ವಡ್ಡರ ಸಮಾಜದ ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಶೀಲಾ ಕಾಶಿ ಅವರು ಸುಮಾರು 35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷಕ್ಕೆ ನೀಡಿದ ಅವರ ಸೇವೆ ಅಪಾರವಾಗಿದೆ ಹೀಗಾಗಿ ಇವರ ಸೇವೆಯನ್ನು ಗುರುತಿಸಿ ಯಾವುದಾದರೂ ನಿಗಮ ಮಂಡಳಿಗೆ ನಾಮನಿರ್ದೇಶನ ಮಾಡಬೇಕು ಎಂದು ಮನವಿ ಮಾಡಿದರು.
ಸಮಾಜದ ಅಧ್ಯಕ್ಷ ರಾಜೇಶ್ ಬಿ.ಕಾಶಿ ಮಾತನಾಡಿ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಪ್ರಗತಿಪರರು ಹಾಗೂ ಅಭಿವೃದ್ಧಿ ಹರಿಕಾರರಾಗಿದ್ದು, ಇವರಿಗೆ ಡಿಸಿಎಂ ಮಾಡಬೇಕು ಹಾಗೂ ನಮ್ಮ ಕಾಶಿ ವಡ್ಡರ ಸಮಾಜದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ ಮತ್ತು ಶೀಲಾ ಕಾಶಿ ಅವರಿಗೆ ನೂತನ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸಾಯಬಣ್ಣ ಕಾಶಿ, ಪ್ರಧಾನ ಕಾರ್ಯದರ್ಶಿ ಬಾಬು ಕಾಶಿ, ಮಹಿಳಾ ಅಧ್ಯಕ್ಷೆ ಶಾಂತಾಬಾಯಿ ಗಾಯಕವಾಡ, ಮುಖಂಡರಾದ ಜಗನ್ನಾಥ ಗಾಯಕವಾಡ, ಬಸವರಾಜ ಕಾಶಿ, ಯಲ್ಲಪ್ಪ ಕಾಶಿ, ಸಂಜಯ ಕಾಶಿ, ಚೆನ್ನಮ್ಮ ಕಾಶಿ, ಯಲ್ಲಮ್ಮ ಕಾಶಿ, ಮಹಾದೇವಿ ಕಾಶಿ, ಮಹೇಶ್ ಕಾಶಿ, ಭರತ್ ಕಾಶಿ, ನರಸಿಂಹ ಕಾಶಿ ಸೇರಿದಂತೆ ಇತರರು ಇದ್ದರು.

