ಕಲ್ಯಾಣ ಕರ್ನಾಟಕದ ಆಲ್ ಇಂಡಿಯಾ ಜನರಕ್ಷ ಪಾರ್ಟಿಯ ವಿಭಾಗೀಯ ಅಧ್ಯಕ್ಷರಾಗಿ ಸಿದ್ದು ಜಮಾದಾರ್ ನೇಮಕ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಆಲ್ ಇಂಡಿಯಾ ಜನರಕ್ಷ ಪಾರ್ಟಿಯ ಕಲ್ಯಾಣ ಕರ್ನಾಟಕ ವಿಭಾಗದ (ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು) ವಿಭಾಗೀಯ ಅಧ್ಯಕ್ಷರನ್ನಾಗಿ ಸಿದ್ದು (ಗೌತಮ್) ಹೆಚ್. ಜಮಾದಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಿಯ ಅಧ್ಯಕ್ಷ ಜಿ.ಕೆ.ಎಸ್. ಲಕ್ಕಪ್ಪ ತಿಳಿಸಿದ್ದಾರೆ.
ಈ ಕೂಡಲೇ ಪಕ್ಷದ ಸಂಘಟನೆ ಬಲಪಡಿಸಲು, ಕಾರ್ಯಕರ್ತರನ್ನು ಒಟ್ಟಿಗೆ ಸೇರಿಸಲು ಹಾಗೂ ಪಕ್ಷದ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸಲು ಮುಂದಾಗಬೇಕು ಅಲ್ಲದೆ, ಪಕ್ಷದ ಗೌರವಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.
ಈ ನೇಮಕಾತಿಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷದ ಚಟುವಟಿಕೆಗಳಿಗೆ ಇನ್ನಷ್ಟು ಚೈತನ್ಯ ಸಿಗಲಿದೆ ಎಂದು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

