Oplus_0

ಚರಗ ಚೆಲ್ಲುವುದು ಬೆಳೆಗಳ ರಕ್ಷಣೆ ವೈಜ್ಞಾನಿಕ ಕ್ರಿಯೆ: ಶಿವರಾಜ ಅಂಡಗಿ

ನಾಗಾವಿ ಎಕ್ಸಪ್ರೆಸ್

ಕಲಬುರ್ಗಿ: ರೈತರು ಬೆಳೆದ ಬೆಳೆಗಳಿಗೆ ಮೌಲ್ಯವಿದೆ ಅವರ ಶ್ರಮ ಅಮೂಲ್ಯವಾದದ್ದು ಎನ್ನುತ್ತಾ ರೈತರು ಭೂಮಿ ತಾಯಿಗೆ ಪೂಜಿಸುವ ಮೂಲಕ ಕೀಟನಾಶಕಗಳಿಂದ ಬೇಳೆ ರಕ್ಷಣೆ ಮಾಡುವುದು ವೈಜ್ಞಾನಿಕ ಮತ್ತು ಭಕ್ತಿಯ ಕ್ರಿಯೆ ಎಂದು ತೆಂಗಳಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.

ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ ವೀರಸಂಗಪ್ಪಾ ಬುಳ್ಳಾ ಅವರ ಹೋಲದಲ್ಲಿ ಎಳ್ಳಮಾಸ್ಸೆಯ ವಿಶೇಷ ಭೋಜನಾ ಸ್ವೀಕರಿಸಿ ಮಾತನಾಡಿದರ ಅವರು, ಜಾಗತೀಕರಣ ಮಧ್ಯದಲ್ಲಿ ನಮ್ಮ ಹಳ್ಳಿ ಸೊಗಡಿನ ಸಂಸ್ಕೃತಿ ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ವೀರಸಂಗಪ್ಪಾ ಬುಳ್ಳಾ ಅವರು ನೂರಾರು ಬಂಧು-ಬಳಗ ಹಾಗೂ ಗೆಳೆಯರಿಗೆ ಎಳ್ಳ ಅಮಾವಾಸ್ಯೆಯ ವಿಶೇಷ ಭೋಜನಾ ಸಜ್ಜೆ, ಜೋಳದ ರೋಟ್ಟಿ ಶೇಂಗಾ ಹೊಳಿಗೆ, ಅಗಸಿ ಚಟ್ನಿ ಎಣ್ಣೆಗಾಯಿ ಕಡುಬು, ಅಂಬಲಿ ವ್ಯವಸ್ಥೆ ಮಾಡಿ ನಮ್ಮ ರೈತರ ಪರಂಪರೆಯನ್ನು ಮಂದುವರೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ವಿನೋದಕುಮಾರ ಜನೇವರಿ ಮಾತನಾಡಿದ್ದರು. ಪ್ರದೀಪ ಸಂಗಾ ಅವರು ವೀರಸಂಗಪ್ಪಾ ಬುಳ್ಳಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಚಂದ್ರಶೇಖರ ಮಾಳಿಗಿ, ಡಾ. ಬಸವರಾಜ ಚಿನ್ನಾ, ಶ್ರೀನಿವಾಸ ಬಲಪೂರ, ಧರ್ಮರಾಜ ಜವಳಿ, ಗಣೇಶ ಸಂಗಾ, ರುಕ್ಮಣಿ, ಪರಿಣಿತ, ಮಾಳಾಬಾಯಿ ಬುಳ್ಳಾ, ನಾಗೇಶಕುಮಾರ, ವೀರೇಶಕುಮಾರ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!