ಚಿತ್ತಾಪುರದಲ್ಲಿ ಒಳ ಮೀಸಲಾತಿ ವಿರೋಧಿಸಿ ಪ್ರತಿಭಟನೆ | ಬಂಜಾರ, ಭೋವಿ, ಕೊರಮಾ, ಕೊರಚಾ ಸಮುದಾಯಕ್ಕೆ ಶೇ.6 ಪ್ರತಿಶಥ ಹಾಗೂ ಅಲೇಮಾರಿ ಸಮುದಾಯಕ್ಕೆ ಶೇ.1 ಮೀಸಲು ನೀಡಲು ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಒಳ ಮೀಸಲಾತಿಯಲ್ಲಿ ಸ್ಪರ್ಷ ಸಮುದಾಯ ಎಂದು ಹೇಳಿ ಹಾಕಿರುವ ಶಬ್ದವನ್ನು ತೆಗೆದು ಹಾಕಬೇಕು. ಬಂಜಾರ, ಭೋವಿ, ಕೊರಮಾ, ಕೊರಚಾ ಸಮುದಾಯಕ್ಕೆ ಶೇ.6 ಪ್ರತಿಶಥ ನೀಡಬೇಕು ಹಾಗೂ ಅಲೇಮಾರಿ ಸಮುದಾಯಕ್ಕೆ ಶೇ.1 ಮೀಸಲು ನೀಡಬೇಕು ಎಂದು ಒತ್ತಾಯಿಸಿ ಬಂಜಾರ, ಭೋವಿ, ಕೊರಚಾ ಮತ್ತು ಕೊರಮ ಸಮಾಜಗಳ ಕ್ಷೇಮಾಭವೃದ್ಧಿ ಸಂಘದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಮುಖಂಡರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಚಂದು ಜಾಧವ ಮಾತನಾಡಿ, ಸುಪ್ರೀಂ ಕೋರ್ಟನ ತೀರ್ಪಿನ ದೃಷ್ಟಿಯಿಂದ ಎಸ್.ಸಿ.ಗಳಲ್ಲಿ ಅಂತರಿಕ ಮೀಸಲಾತಿಯ ಸಮಸ್ಯೆಗಳನ್ನು ನಿರ್ಧರಿಸಲು ಸರ್ಕಾರವು ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಿಸಲು ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು ಸಮೀಕ್ಷೆ ನಡೆಸಲು ಮತ್ತು ಪ್ರಾಯೋಗಿಕ ದಾತ್ತಾಂಶವನ್ನು ಸಂಗ್ರಹಿಸಲು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರನ್ನು ಏಕವ್ಯಕ್ತಿ ವಿಚಾರಣಾ ಆಯೋಗವಾಗಿ ನೇಮಿಸಿತ್ತು. ಆದರೆ, ಸರ್ಕಾರವು ನಾಗಮೋನ್ ದಾಸ್ ಕೊಟ್ಟಂತ ವರಧಿಯನ್ನು ಸಂಪೂರ್ಣ ಸಮೀಕ್ಷೆ ಮಾಡಲಾರದೆ ಬಂಜಾರಾ, ಭೋವಿ, ಕೊರಮಾ, ಕೊರಚಾ ಹಾಗೂ ಅಲೆಮಾರಿ ಸಮುದಾಯದವರು ಗೂಳೆ ಹೋಗಿದ್ದರಿಂದ ಸರಿಯಾಗಿ ಸಮೀಕ್ಷೆ ಆಗಿರುವುದಿಲ್ಲ ಹಾಗೂ ನಾಗಮೋಹನ್ ದಾಸ್ ಸಲ್ಲಿಸಿರುವ ವರದಿಯಲ್ಲಿ ಸಿ. ಕೆಟೆಗಿರಿ ಬರುವ ಜಾತಿಗಳು ಸುಮಾರು 63 ಸ್ಪರ್ಷ ಜಾತಿ ಎಂದು ವರದಿಯಲ್ಲಿ ಕೊಟ್ಟಿದ್ದು ಸಂವಿದಾನ ವಿರೋಧಿಯಾಗಿದ್ದು, ಇದಕ್ಕೆ ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಒಳ ಮೀಸಲಾತಿ ಕುರಿತು ನಾಗಮೋಹನ್‌ದಾಸ್ ಆಯೋಗವು ಮಾಡಿರುವ ಶಿಫಾರಸ್ಸು, ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರ ಮತ್ತು ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ ಮತ್ತು ರಾಜ್ಯದ ಅಡಿಯಲ್ಲಿ ಸೇವೆಗಳಲ್ಲಿನ ನೇಮಕಾತಿಗಳು ಅಥವಾ ಹುದ್ದೆಗಳ ಮೀಸಲಾತಿ) ಕಾಯ್ದೆ 2022ರ ಸೆಕ್ಷನ್ (1)ರ ಅಡಿಯಲ್ಲಿ ರಚಿಸಲಾದ ಕರಡು ನಿಯಮಗಳಿಗೆ ಆಕ್ಷೇಪಣೆ ಇದೆ ಎಂದು ಹೇಳಿದರು.
ಮುಖಂಡರಾದ ಜಗಧೀಶ ಚವ್ಹಾಣ, ಮಹೇಶ ಕಾಶಿ, ವಿಠಲ್ ಕಟ್ಟಿಮನಿ ಅವರು ಮಾತನಾಡಿ, ಬಂಜಾರ, ಭೋವಿ, ಕೊರಮಾ, ಕೊರಚಾ ಹಾಗೂ ಅಲೇಮಾರಿ ಈಗಲೂ ಕೂಡ ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಮೇಲ್ವಾತಿಯವರು ಈಗಲೂ ಕೂಡ ಈ ಸಮುದಾಯಗಳ ಜನರಿಗೆ ಕೀಳು ದೃಷ್ಟಿಯಿಂದ ನೋಡುತ್ತಾರೆ ಹಾಗೂ ಈ ವರಧಿಯನ್ನು ಪರಿಶೀಲನೆ ಮಾಡಿ ಈ ಸಮುದಾಯಗಳ ಜನಂಖ್ಯೆ ಹೆಚ್ಚಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಹಿಂದುಳಿದರಿಂದ ಬಂಜಾರ, ಭೋವಿ, ಕೋರಮಾ, ಕೋರಚಾ ಸಮುದಾಯಕ್ಕೆ ಶೇ.6 ಪ್ರತಿಶತ ಹಾಗೂ ಅಲೇಮಾರಿ ಸಮುದಾಯಕ್ಕೆ ಶೇ.1ನ್ನು ಹಂಚಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೋವಿ ವಡ್ಡರ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ರಾಮಯ್ಯ ಪೂಜಾರಿ, ತಾಲೂಕು ಅಧ್ಯಕ್ಷ ಹಣಮಂತ ಕಟ್ಟಿಮನಿ, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಮುಖಂಡರಾದ ಗೋಪಾಲ ರಾಠೋಡ, ಹೀರು ರಾಠೋಡ, ದೇವಿದಾಸ ಚವ್ಹಾಣ, ಶಿವು ಭಜಂತ್ರಿ, ವಿಜಯಕುಮಾರ ಚವ್ಹಾಣ ಯಾಗಪೂರ, ವಿನೋಧ ಪವಾರ, ರಾಮು ಹರವಾಳ, ಸುಭಾಷ್ ಪವಾರ, ಚಂದ್ರು ಗುಂಡಲಕರ್, ಬೋರು ರಾಠೋಡ, ಚಂದರ್ ಚವ್ಹಾಣ, ಲಖನ್ ಚವ್ಹಾಣ, ಚಂದ್ರು ರಾಠೋಡ, ಲೋಹಿತ್ ರಾಠೋಡ, ಜಗದೀಶ್ ಪವಾರ, ಕುಮಾರ್ ಚವ್ಹಾಣ, ವಿಜಯ ರಾಠೋಡ, ವಿಶಾಲ ನಾಯಕ, ಗೋಪಿ ಬಂಜಾರ, ಅಶೋಕ್ ಕಾಶಿ, ತಮಣ್ಣ ಭೋಸಗಿ, ರಾಜು ರಾಠೋಡ, ಸಂತೋಷ ರಾಠೋಡ, ವೆಂಕಟೇಶ್ ಇಂಗಳಗಿ ಸೇರಿದಂತೆ ಇತರರು ಇದ್ದರು.
