Oplus_0

ಮಾಲಗತ್ತಿ ಶ್ರೀ ಹನುಮಾನ್ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ನೋಂದಣಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಮತಕ್ಷೇತ್ರದ ಮಾಲಗತ್ತಿ ಗ್ರಾಮದ ಶ್ರೀ ಹನುಮಾನ್ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಚಿತ್ತಾಪುರ ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಶನಿವಾರ ಟ್ರಸ್ಟ್  ನೋಂದಣಿ ಮಾಡಲಾಯಿತು.

ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಇಟಗಿ, ಉಪಾಧ್ಯಕ್ಷರಾಗಿ ಶಿವಲಿಂಗ ವಾಲಿಕಾರ,  ಪ್ರದಾನ ಕಾರ್ಯದರ್ಶಿ ಶಿವಾನಂದ ಅಲ್ಲೂರ, ಸಹ ಕಾರ್ಯದರ್ಶಿ ಈಶ್ವರ್ ಮುಗುಳನಾಗಾಂವ್ ಖಜಾಂಚಿ ಮಲ್ಲಿಕಾರ್ಜುನ ಸಣಮೋ, ಸದಸ್ಯರುಗಳಾಗಿ ಮಲ್ಲಪ್ಪ ತಳವಾರ, ರವಿ ಯರಗೋಳ, ದೇವರಾಜ ಬಾಳಕ, ಬಸವರಾಜ ಹಾಲ್ಲಿನ, ಬಾಲಕೃಷ್ಣ ಜೋಶಿ, ಬಸವರಾಜ್ ಯಾದಗಿರಿ, ಸಿದ್ದಪ್ಪ ಅಲ್ಲೂರ್, ಶಿವಪ್ಪ ಸಣಮೋ, ಈಶ್ವರಾಜ ಹೂಗಾರ, ಮಲ್ಲಪ್ಪ ಕೆ ತಳವಾರ, ಹೀರಾಚಂದ ದುಗೊಂಡ್, ಸೂರ್ಯಕಾಂತ ನಾಲವಾರ, ಶಿವಪ್ಪ ಬಾಳಕ, ಶಿವಪ್ಪ ಕುನ್ನೂರ, ಮನೋಜ ಮಲ್ಲೇದ, ಗುಂಡಪ್ಪ ದಿಡ್ಡಿಮನಿ ಅವರು ನೇಮಕ ಆಗಿದ್ದಾರೆ.

ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಇಟಗಿ ಮಾತನಾಡಿ, ಹನುಮಾನ್ ದೇವಸ್ಥಾನ ಜೀರ್ಣೋದ್ಧಾರ ಮಾಡಲು ಟ್ರಸ್ಟ್ ರಚನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಹಾಗೂ ದಾನಿಗಳಿಂದ ದೇಣಿಗೆ ಮತ್ತು ಅನುದಾನ ತೆಗೆದುಕೊಂಡು ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಲಾಗುವುದು ಹೀಗಾಗಿ ಈ ಪುಣ್ಯದ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!