Oplus_0

ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಮನವಿ | ಹಗಲುವೇಷ ಕಲೆಗೆ ನ್ಯಾಯ, ಗೌರವ ತಂದ ಕಲಾವಿದ ಈರಣ್ಣ ರುದ್ರಾಕ್ಷಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಐತಿಹಾಸಿಕ ಹಿನ್ನೆಲೆ ಹಾಗೂ ಪ್ರಾಚೀನ ಕಾಲದಿಂದಲೂ ಆದ ಜನಮಾನಸದಲ್ಲಿ ಸದಾ ಅಚ್ಚು ಉಳಿಯುವಂತಿರುವ ಹಗಲುವೇಷ ಕಲಾ ಪ್ರದರ್ಶನ ತನ್ನದೇ ಮಹತ್ವವನ್ನು ಪಡೆದು. ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಆಕರ್ಷಿತಗೊಂಡಿದೆ.

ಇಂತಹ ಭವ್ಯ ಇತಿಹಾಸ ಇರುವ ಕಲೆಯನ್ನು ಜೀವಂತವಾಗಿ ಇಟ್ಟುಕೊಂಡು ಬಂದ ಹಗಲುವೇಷ ಕಲೆಗೆ ನ್ಯಾಯ ಹಾಗೂ ಗೌರವ ತಂದುಕೊಟ್ಟ ಅಪ್ರತಿಮ ಕಲಾವಿದ ರಾಯಚೂರು ದೇವದುರ್ಗ ತಾಲೂಕಿನ ಈರಣ್ಣ ರುದ್ರಾಕ್ಷಿ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಹೀಗಾಗಿ ಸರ್ಕಾರ ಈ ಕಲಾವಿದನಿಗೆ ನ್ಯಾಯ ದೊರಕಿಸಿ ಕೊಡಬೇಕಿದೆ.

ಅಮೂಲ್ಯವಾದ ಕಲೆಯನ್ನು ನಿರಂತರವಾಗಿ ಪ್ರದರ್ಶನ ಮಾಡುವುದರ ಮೂಲಕ ರುದಾಕ್ಷಿ ಮನೆತನದ ಸದಸ್ಯರು ಕಳೆದ 3-4 ಶತಕಗಳಿಂದ ಹಗಲುವೇಷ ಕಲೆಯನ್ನು ಪೋಷಿಸುತ್ತಾ ಬಂದಿದೆ.

ಪೌರಾಣಿಕ ಇತಿಹಾಸ, ಪಾತ್ರಕ್ಕೆ ತಕ್ಕ ವೇಷ-ಭೂಷಣ, ಸಂಗೀತ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತೆ ಕಾಲ ಕಾಲಕ್ಕೆ ಅದರ ಮಹತ್ವವನ್ನು ಮೂಲತಃ ಹಗಲುವೇಷ (ಬುಡ್ಗ ಜಂಗಮ) ಸಮುದಾಯಗಳು ಅಲೆಮಾರಿಗಳಾಗಿದ್ದರೂ, ರುದ್ರಾಕ್ಷಿ ಮನೆತನ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಿರಂತರ ಸಂಪರ್ಕ ಇಟ್ಟುಕೊಂಡು ಅನೇಕ ಪೋಷಕರ. ಅಭಿಮಾನಿಗಳನ್ನು ಹೊಂದಿದೆ. ಗ್ರಾಮೀಣ ಜನತೆಯ ಪ್ರೀತಿ-ವಿಶ್ವಾಸಗಳನ್ನು ಗಳಿಸಿ ಜನಪ್ರೀಯತೆಯನ್ನು ಪಡೆದಿದೆ.

ಇಂತಹ ಬಹು ದೊಡ್ಡ ಮನೆತನದ ಹಿನ್ನೆಲೆಯನ್ನು ಹೊಂದಿರುವ ರುದ್ರಾಕ್ಷಿ ಮನೆತನದ ರಾಮಣ್ಣ ದಂಪತಿಗಳ ಪುತ್ರನಾಗಿರುವ ಈರಣ್ಣ ರುದ್ರಾಕ್ಷಿ ಅಪ್ರತಿಮ ಕಲಾವಿದ ಎಂದು ಗುರುತಿಸಿಕೊಂಡಿದ್ದಾರೆ.

ಕಲಾವಿದ ಈರಣ್ಣ ರುದ್ರಾಕ್ಷಿ ಹಂಪಿ ಉತ್ಸವ. ಮೈಸೂರ ದಸರಾ, ವಿಶ್ವ ಕನ್ನಡ ಸಮ್ಮೇಳನ, ಜಾನಪದೋತ್ಸವ, ಕನ್ನಡ ರಾಜ್ಯೋತ್ಸವದಂತಹ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಅಲ್ಲದೇ ಆಂದ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ದೆಹಲಿಯಲ್ಲಿ ಹಗಲುವೇಷ ಪಾತ್ರಧಾರಿಯಾಗಿ ಕಲಾ ಪ್ರದರ್ಶನ ಮಾಡಿದ್ದಾರೆ. ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸೂರ, ಜಟಾಶೂರ ವಧೆ, ಕಂಸನ ವಧೆ, ಸುಂದ-ಉಪಸುಂದ, ರಾಮಾಯಣ, ಮಹಾಭಾರತ ಪೌರಾಣಿಕ ಪ್ರದರ್ಶನ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಹಿನ್ನೆಲೆಯುಳ್ಳ ಸಿಂಧೂರ ಲಕ್ಷಣ, ವೀರ ಸಂಗೊಳ್ಳಿ ರಾಯಣ್ಣದಂತಹ ಪ್ರದರ್ಶನಗಳಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಭೀಮ, ರಾವಣ, ದುರ್ಯೋಧನ, ಆಂಜನೇಯ, ಶ್ರೀರಾಮ ಒಳಗೊಂಡಂತೆ ಸಿಂಧೂರ ಲಕ್ಷಣ, ಸಂಗೊಳ್ಳಿ ರಾಯಣ್ಣದಂತಹ ಪ್ರಮುಖ ಪಾತ್ರಗಳನ್ನು ಪ್ರದರ್ಶಿಸಿರುವ ಮೂಲಕ ಪಾತ್ರಗಳಿಗೆ ಹಾಗೂ ಅದರ ಮೂಲ ತತ್ವಗಳಿಗೆ ಈರಣ್ಣ ರುದ್ರಾಕ್ಷಿ ಉತ್ತಮ ಕಲಾಪ್ರದರ್ಶನ ಮಾಡುವ ಮೂಲಕ ನ್ಯಾಯ ಒದಗಿಸಿದ್ದಾರೆ.

ಕೇವಲ ಪಾತ್ರಗಳಿಗೆ ಸೀಮಿತವಾಗದೇ, ನಿರ್ದೇಶಕನಾಗಿ, ಸಂಗೀತದ ಎಲ್ಲಾ ಪ್ರಕಾರಗಳ ವಾದ್ಯಗಳನ್ನು ನುಡಿಸುವ ಹಾಗೂ ದುರಸ್ತಿ ಕೂಡ ಮಾಡುವ ಪ್ರವೀಣತೆಯನ್ನು ಹೊಂದಿರುವ ಕಲಾವಿದ ಈರಣ್ಣ ರುದ್ರಾಕ್ಷಿ ಕಲೆ ಇತರರಿಗೆ ಮಾದರಿಯಾಗಿದೆ.

ರಾಯಚೂರು ಜಿಲ್ಲಾ ರಾಜ್ಯೋತ್ಸವ, ಕರ್ನಾಟಕ ಜಾನಪದ ಪರಿಷತ್ತು. ಸಂಗೊಳ್ಳಿ ರಾಯಣ್ಣ ಉತ್ಸವ, ಕರ್ನಾಟಕ ಜಾನಪದ ಅಕಾಡಮಿ, ಹಂಪಿ ಉತ್ಸವ, ಬೆಳವಾಡಿ ಮಲ್ಲಮ್ಮ ಉತ್ಸವ, ವಿಶ್ವ ಕನ್ನಡ ಸಮ್ಮೇಳನ ಸೇರಿದಂತೆ ಅನೇಕ ಮಠ-ಪೀಠಗಳು, ಕಲೆ, ಸಾಂಸ್ಕೃತಿಕ ಸಂಘಗಳು, ಸಾಹಿತ್ಯ ಸಮ್ಮೇಳನದ ಪ್ರಶಸ್ತಿ, ಪುರಸ್ಕಾರಗಳನ್ನು ಈರಣ್ಣ ರುದ್ರಾಕ್ಷಿ ಪಡೆದಿದ್ದಾರೆ.

“ಗ್ರಾಮೀಣ ಭಾಗದಲ್ಲಿ ಜಾನಪದ ಹಾಗೂ ಹಗಲುವೇಷ ಕಲಾವಿದರಾಗಿ ಗುರುತಿಸಿಕೊಂಡು ಇದರ ಉಳುವಿಗಾಗಿ ಇಡೀ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅತ್ಯಂತ ಹಿಂದುಳಿದ ಬುಡ್ಗ ಜಂಗಮದ ಪ್ರತಿಭಾವಂತ ಕಲಾಚತುರ 65 ವರ್ಷದ ಈರಣ್ಣ ರುದ್ರಾಕ್ಷಿ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು”. ಮಾರುತಿ ಶಿರವಾಟಿ ಬುಡ್ಗ ಜಂಗಮ ಸಮಾಜದ ರಾಜ್ಯ ಉಪಾಧ್ಯಕ್ಷರು.

Spread the love

Leave a Reply

Your email address will not be published. Required fields are marked *

error: Content is protected !!