Oplus_0

ಗುರುಮಠಕಲ್ ನಗರದಲ್ಲಿ ನಾಳೆ ಆರ್.ಎಸ್.ಎಸ್ ಪಥ ಸಂಚಲನ 

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ 100 ನಿಮಿತ್ತವಾಗಿ ಗುರುಮಠಕಲ್ ನಗರದಲ್ಲಿ ಪಥ ಸಂಚಲನಕೆ ಜಿಲ್ಲಾಡಳಿತ ಅನುಮತಿ ನೀಡಿದೆ, ಹೀಗಾಗಿ ಗಣವೇಷ ಧರಿಸಿಕೊಂಡು ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯಾದಗಿರಿ ಬಿಜೆಪಿ ಯುವ ಮೋರ್ಚಾ ಮತ್ತು ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುರೇಶ ಅಂಬಿಗೇರ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ಹಿನ್ನಲೆಯಲ್ಲಿ ಇಡೀ ದೇಶಾದ್ಯಾಂತ ಜಿಲ್ಲೆ, ತಾಲ್ಲುಕು ಮತ್ತು ಪಟ್ಟಣ ಕೇಂದ್ರಗಳಲ್ಲಿ ಪಥಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ನಾಳೆ ಅಕ್ಟೋಬರ್ 31 ರಂದು ಗುರುಮಠಕಲ್ ಪಟ್ಟಣದ ಪ್ರಮುಖ ರಸ್ತೆ, ಮಾರ್ಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಪಥ ಸಂಚಲನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪಥ ಸಂಚಲನದ ಮಾರ್ಗ:  ಗುರುಮಠಕಲ್ ನಗರದ ಸ.ನಂ 12 ಶ್ರೀಮತಿ ಲಕ್ಷ್ಮೀಬಾಯಿ ನರೇಂದ್ರ ರಾಠೋಡ್ ಅವರ ಲೇಔಟ್ ನಲ್ಲಿ ಮದ್ಯಾಹ್ನ 3 ಗಂಟೆಗೆ ಸಂಪತ ಆಗಿ, 5 ಗಂಟೆಗೆ ಸಂಚಲನ ಪ್ರಾರಂಭಆಗುತ್ತದೆ. ಸಂಚಲನ ಸಾಮ್ರಾಟ್ ವೃತ್ತ, ಎಪಿಎಂಸಿ ವೃತ್ತ, ಹನುಮಾನ್ ದೇವಸ್ಥಾನ (ಬಸ್ ನಿಲ್ದಾಣದ ಹತ್ತಿರ), ಮಲ್ಲಯಕಟ್ಟಾ, ನೀರೆಟಿ ಓಣಿ, ಬಡಿಗೇರ್ ಓಣಿ, ನಗರೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ನಾನಾಪೂರ್ ಓಣಿ, ಕುಂಬಾರವಾಡಿ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ ಚೌಕ್, ಸಿಹಿ ನೀರಿನ ಬಾವಿ, ಮಾರ್ಕೆಟ್ ಮುಖ್ಯರಸ್ತೆಯ ಮುಖಾಂತರ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಮಾರ್ಗವಾಗಿ, ಗುರುಮಠಕಲ್ ನಗರದ ಸ.ನಂ 11 ರತ್ನಮ್ಮ ದಿ.ಈರಾರೆಡ್ಡಿ ಚಪೇಟ್ಲಾ ರಾಮನಗರ ಅವರ ಲೇಔಟ್ ನಲ್ಲಿ ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!