Oplus_131072

ಕಲಬುರಗಿ ಡ್ರಗ್ ಪೆಡ್ಲರ್ ಗಳನ್ನ ಬಂಧನ ಮಾಡಿ: ಬಾಲರಾಜ ಗುತ್ತೇದಾರ ಆಗ್ರಹ 

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನನ್ನು ಮುಂಬೈ ಪೊಲೀಸರು ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಬಂಧಿಸಿರುವಂತೆ ಕಲಬುರ್ಗಿಯಲ್ಲಿನ ಡ್ರಗ್ ಪೆಡ್ಲರ್ ಗಳನ್ನು ಬಂಧನ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ ಆಗ್ರಹಿಸಿದ್ದಾರೆ.

ಈ‌ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕಲಬುರಗಿಯಲ್ಲಿ ಹಾಡುಹಗಲೇ ಕೊಲೆ, ದರೋಡೆ, ಡ್ರಗ್ ಸೇರಿ ಅಕ್ರಮ ದಂಧೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಆದರೆ ಪೊಲೀಸರು ರಾಜಕೀಯ ಪ್ರಭಾವದಿಂದ ಅಸಾಯಕರಾಗಿದ್ದಾರೆ. ಮುಂಬೈ ಪೊಲೀಸರು ಬಂಧಿಸಿದರು, ಆದರೆ ನಮ್ಮ ಕಲಬುರಗಿ ಪೊಲೀಸರಿಗೆ ಸಿಕ್ಕಲ್ಲವೇಕೆ? ಇದೇನಾ ಕಾಂಗ್ರೆಸ್ ಗ್ಯಾರಂಟಿ ಎಂದು ಪ್ರಶ್ನಿಸಿದ್ದಾರೆ.

ಡ್ರಗ್ ದಂತಹ ಮಾಧಕ ವಸ್ತುಗಳು ಮಕ್ಕಳ ಕೈಗೆಟಗುತ್ತಿದ್ದು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಶಾಸಕರು, ಸಚಿವರು ಅಕ್ರಮದ ಬೆನ್ನಿಗೆ ನಿಲ್ಲೋದನ್ನು ಬಿಟ್ಟು ಅಕ್ರಮಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಗುತ್ತೇದಾರ ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!