ನೋಂದಣಿಯಾಗದ ಸಂಘಗಳ ಹಾಗೂ ಸರ್ಕಾರಿ ನೌಕರರು ಕೆಲಸದ ವೇಳೆಯಲ್ಲಿ ಬೇರೆ ಖಾಸಗಿ ಕೆಲಸದಲ್ಲಿ ಭಾಗವಹಿಸಿದ್ದು ಕಂಡುಬಂದಲ್ಲಿ ಅಮಾನತ್ತು ಮಾಡುವಂತೆ ಜಮಾದಾರ್ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ನೋಂದಣಿಯಾಗದ ಕಾನೂನು ಬಾಹಿರ ಸಂಘಟನೆಗಳಿಂದ ಮನವಿ ಪತ್ರ ಸ್ವೀಕರಿಸಬಾರದು, ಮತ್ತು ಪತ್ರಿಕೆಯಲ್ಲಿ ಪ್ರಕಟಿಸದಂತೆ ಮತ್ತು ಸರ್ಕಾರಿ ನೌಕರರು ತಮ್ಮ ಕೆಲಸದ ವೇಳೆಯಲ್ಲಿ ಬೇರೆ ಖಾಸಗಿ ಕೆಲಸದಲ್ಲಿ ಭಾಗವಹಿಸಿದ್ದು ಕಂಡುಬಂದಲ್ಲಿ ಕೂಡಲೇ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಸದರಿಯವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕು ಎಂದು ಆಗ್ರಹಿಸಿ ಜೈ ಕರುನಾಡು ಜನಪರ ಸಮಿತಿ ರಾಜ್ಯಾಧ್ಯಕ್ಷ ಸಿದ್ದು (ಗೌತಮ ಹೆಚ್ ಜಮಾದಾರ್) ಅವರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಸಂಘ, ಸಮಿತಿ, ವೇದಿಕೆ ಮತ್ತು ಕೆಲವೊಂದು ಸಮಾಜದ ಸಂಘಟನೆಗಳು ನೋಂದಣಿ ಮಾಡದೆ ಇರುವಂತಹ ಸಂಘಟನೆಗಳಿಂದ ಹೋರಾಟಗಳನ್ನು ಮಾಡುತ್ತಿದ್ದಾರೆಂದು ಮತ್ತು ಪತ್ರಿಕೆಗೋಷ್ಠಿ ಕೂಡಾ ನೋಂದಣಿ ಸಂಖ್ಯೆಯಿರಲಾರದಂತಹ ಮನವಿ ಪತ್ರದಿಂದ ಪತ್ರಿಕೆ ಭವನದಲ್ಲಿ ಪತ್ರಿಕಾಗೋಷ್ಠಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ನೊಂದಣಿ ಸಂಖ್ಯೆ ಇದ್ದರೆ ಮಾತ್ರ ಮನವಿ ಪತ್ರ ಸ್ವೀಕರಿಸಬೇಕು ಹಾಗೂ ನೊಂದಣಿ ಸಂಖ್ಯೆಯಿಲ್ಲದಿದ್ದರೆ ಅಂತಹ ಮನವಿ ಪತ್ರಗಳನ್ನು ಸ್ವೀಕರಿಸಬಾರದು ಪತ್ರಿಕೆಯಲ್ಲಿ ಪ್ರಕಟಿಸಬಾರದು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ನೌಕರರು ತಮ್ಮ ಕೆಲಸದ ವೇಳೆಯಲ್ಲಿ ನಮ್ಮ ಗೆಳೆಯರ, ಸಂಬಂಧಿಕರ ಮತ್ತು ಕುಟುಂಬಸ್ಥರ ಮನೆಯಲ್ಲಿ ಸಮಾರಂಭ ಇದೆ ಎಂದು ರಜೆ ಹಾಕಿ ಖಾಸಗಿ ಕೆಲಸದಲ್ಲಿ ಅಂದರೆ ಉದಾಹರಣೆ. ಮನೆ/ಪ್ಲಾಟ ಹೊಲದಲ್ಲಿ ಭಾಗವಹಿಸಿ ಕಮೀಷನ್ ಮೇಲೆ ದಲ್ಲಾಳಿಯಂತೆ ಕೆಲಸ ಮಾಡಿ ಹೆಚ್ಚಿನ ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಕಮೀಷನ್ ಹಣ ತೆಗೆದುಕೊಂಡಿರುವ ದಾಖಲೆ ಸಾಕ್ಷಿಗಳಿದ್ದರೆ ಅಂತಹ ಸರ್ಕಾರಿ ನೌಕರರನ್ನು ಕೆಲಸ ದಿಂದ ಆ ಹುದ್ದೆಯಿಂದ ಕೂಡಲೇ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಶಾಸಕರು ಮತ್ತು ಸಚಿವರು ನಮ್ಮ ಸಂಬಂಧಿಕರೆಂದು ಅವರ ಹೆಸರು ಹೇಳಿ ದುರುಪಯೋಗ ಮಾಡುತ್ತಿದ್ದಾರೆಂದು ನಮ್ಮ ಗಮನಕ್ಕೆ ಬಂದಿರುತ್ತದೆ, ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರಿ ನೌಕರರು ತಮ್ಮ ಕೆಲಸದ ವೇಳೆಯಲ್ಲಿ ರಜೆ ಹಾಕಿ ಬೇರೆ ವ್ಯವಹಾರದಲ್ಲಿ ಕಮೀಷನ್ ರೂಪದಲ್ಲಿ ಹಣ ಪಡೆದುಕೊಂಡಿರುವುದು ಸಾಕ್ಷಿ ದೊರೆತಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಕಾನೂನಿನ ಪ್ರಕಾರ ಶಿಸ್ತಿನ ಕ್ರಮ ಜರುಗಿಸಿ ಅವರನ್ನು ಸೇವೆಯಿಂದ ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

