Oplus_0

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಚುನಾವಣೆ | ಡಾ.ರವೀಂದ್ರನಾಥ ಹೊಸಮನಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ 

ನಾಗಾವಿ ಎಕ್ಸಪ್ರೆಸ್ 

ಯಾದಗಿರಿ: ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಜಿಲ್ಲಾ ಸಂಘದ 2026-31ನೇ ಅವಧಿಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರು ಸೇರಿದಂತೆಯೇ ಎಲ್ಲ ಒಂಬತ್ತು ಜನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಲ್ಲಯ್ಯ ಸ್ವಾಮಿ ಮಠಪತಿ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಹುದ್ದೆಗಳಿಗಾಗಿ 9 ಜನರು ನಾಮಪತ್ರ ಸಲ್ಲಿಸಿದ್ದರು. ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಹೆಚ್ಚಿನ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಈ ಎಲ್ಲ ಒಂಬತ್ತು ಜನರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

ಡಾ.ರವೀಂದ್ರನಾಥ ಹೊಸಮನಿ (ಜಿಲ್ಲಾಧ್ಯಕ್ಷ), ಸುದರ್ಶನರೆಡ್ಡಿ (ಕಾರ್ಯಾಧ್ಯಕ್ಷ), ನಿರ್ಮಲಾ ಸಿನ್ನೂ‌ರ್ (ಉಪಾಧ್ಯಕ್ಷರು), ರವೀಂದ್ರ ಎನ್.ಗುತ್ತೇದಾರ (ಖಜಾಂಚಿ), ಅಮರೇಶ ಭಂಗೂರ (ಪ್ರಧಾನ ಕಾರ್ಯದರ್ಶಿ), ರುದ್ರಗೌಡ ಬಿರಾದಾರ (ಪ್ರಧಾನ ಸಂಘಟನಾ ಕಾರ್ಯದರ್ಶಿ), ಚಂದ್ರಶೇಖರ ಡೊಣ್ಣೆಗೌಡ (ಕಾರ್ಯದರ್ಶಿ), ಮರೆಪ್ಪ ನಾಯ್ಯೋಡಿ ಜಂಟಿ ಕಾರ್ಯದರ್ಶಿ ಮತ್ತು ಸೋಫಿಸಾಬ್‌ ಗುತ್ತೇದಾರ (ಸಂಚಾಲಕ) ಈ ರೀತಿಯಾಗಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆಂದು ಮಠಪತಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪನ್ಯಾಸಕರ ಸಂಘದ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ್ ಕಲಾಲ್ ಉಪನ್ಯಾಸಕ ಸಿದ್ರಾಮಪ್ಪ ಅನ್ವಾರ್ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!